ಬಾಂಗ್ಲಾದೇಶದ ವಾಯುಪಡೆ ವಿಮಾನ ದುರಂತ: ಮೃತರ ಸಂಖ್ಯೆ 27ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಪತನಗೊಂಡು ಶಾಲಾ ಕಟ್ಟಡಕ್ಕೆ ಅಪ್ಪಳಿದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಸಾವನ್ನಪ್ಪಿದವರಲ್ಲಿ 25 ಮಕ್ಕಳಿದ್ದಾರೆ. ಸುಮಾರು 170 ಮಂದಿ ಗಾಯಗೊಂಡಿದ್ದು, ಅವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಶಾಲೆಯ ಸಿಬ್ಬಂದಿ ಸೈದೂರ್ ರೆಹಮಾನ್ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ 1:06ರ ಸುಮಾರಿಗೆ ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ಢಾಕಾದ ಉತ್ತರದ ಮೈಲ್‌ಸ್ಟೋನ್ ಶಿಕ್ಷಣ ಸಂಸ್ಥೆಯ ಕ್ಯಾಂಟೀನ್ ಮೇಲೆ ಪತನಗೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!