ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂಸಾಚಾರದಿಂದ ಕಂಗೆಟ್ಟಿದ್ದ ಬಾಂಗ್ಲಾದೇಶ ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳಿದೆ.ದೇಶದಲ್ಲಿ ಮೆಟ್ರೊ, ಬಸ್, ಟ್ಯಾಕ್ಸಿಗಳಂತಹ ಸೇವೆಗಳು ಪುನರಾರಂಭಗೊಂಡಿವೆ.
ದೇಶದಾದ್ಯಂತ ವ್ಯಾಪಾರ- ವಹಿವಾಟುಗಳು ಪುನಾರಂಭಗೊಳ್ಳುತ್ತಿವೆ. ರಾಜಧಾನಿ ಢಾಕಾದಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿಲ್ಲವಾದರೂ ನಿಧಾನವಾಗಿ ಸುಧಾರಿಸುತ್ತಿದೆ.
ಸರ್ಕಾರಿ ನೇಮಕಾತಿಯಲ್ಲಿನ ಮೀಸಲಾತಿ ವಿರೋಧಿಸಿ ಸರ್ಕಾರದ ವಿರುದ್ಧ ಬಾಂಗ್ಲಾದಾದ್ಯಂತ ಯುವಕರು ಮತ್ತು ವಿದ್ಯಾರ್ಥಿಗಳು ಪ್ರಾರಂಭಿಸಿದ ಪ್ರತಿಭಟನೆಯು ತೀವ್ರ ಹಿಂಸಾಚಾರಕ್ಕೆ ತಿರುಗಿತು. ಇದರಿಂದಾಗಿ ಆ.5ರಂದು ಮಾಜಿ ಪ್ರಧಾನಿ ಶೇಕ್ ಹಸೀನಾ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನಗೈದರು.
ನಂತರ ಆ.8ರಂದು ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು. ಹಿಂಸಾಚಾರದಲ್ಲಿ 560ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.