ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮೊಹಮ್ಮದ್ ಯೂನಸ್ ಅವರು ಹಾಗೆಯೇ ಮುಂದುವರೆಯುತ್ತಾರೆ ಎಂದು ಸಂಪುಟದ ಸಲಹೆಗಾರರೊಬ್ಬರು ಶನಿವಾರ ಹೇಳಿದ್ದಾರೆ.
ನಿನ್ನೆಯಷ್ಟೇ ಮೊಹಮ್ಮದ್ ಯೂನಸ್ ಅವರು ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಅವರ ಆಪ್ತರೊಬ್ಬರು ಹೇಳಿದ್ದರು.
ಇದೀಗ ಅವರು(ಯೂನಸ್) ಹುದ್ದೆ ತ್ಯಜಿಸುವುದಾಗಿ ಹೇಳಿಲ್ಲ. ನಮಗೆ ನಿಯೋಜಿಸಲಾದ ಕೆಲಸ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ನಾವು ಅನೇಕ ಅಡೆತಡೆಗಳನ್ನು ಎದುರಿಸುತ್ತಿದ್ದರೂ, ನಾವು ಅವುಗಳನ್ನು ನಿವಾರಿಸುತ್ತಿದ್ದೇವೆ ಎಂದು ಯೋಜನಾ ಸಲಹೆಗಾರ ವಾಹಿದುದ್ದೀನ್ ಮಹಮೂದ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರಲು ವಿಫಲವಾದ ಕಾರಣ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗ ನೇತೃತ್ವದ ನ್ಯಾಷನಲ್ ಸಿಟಿಜನ್ ಪಾರ್ಟಿ(ಎನ್‌ಸಿಪಿ) ಸಂಚಾಲಕ ನಹಿದ್ ಇಸ್ಲಾಂ ತಿಳಿಸಿರುವುದಾಗಿ ಬಿಬಿಸಿ ಬಾಂಗ್ಲಾ ವರದಿ ಮಾಡಿತ್ತು.