March 28, 2026
Saturday, March 28, 2026
spot_img

ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಬಾಂಗ್ಲಾದೇಶ: ಐಪಿಎಲ್ ಮೇಲಿದ್ದ ಪ್ರಸಾರ ನಿಷೇಧ ಹಿಂಪಡೆದ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಐಪಿಎಲ್ ಆವೃತ್ತಿ ಇಂದಿನಿಂದ ಶುರುವಾಗಿದ್ದು, ಇದರ ಮದ್ಯೆ ಬಾಂಗ್ಲಾದೇಶ ತನ್ನ ರಾಷ್ಟ್ರದಲ್ಲಿ ಐಪಿಎಲ್ ಮೇಲಿದ್ದ ಪ್ರಸಾರ ನಿಷೇಧವನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.

ಒಂದೆಡೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬಿರುಕು ಉಂಟಾಗಿದ್ದು, ಈ ಹಿನ್ನೆಲೆ ಈಗಾಗಲೇ ಬಾಂಗ್ಲಾ ಆಟಗಾರರಿಗೆ ಈ ಬಾರಿ ಐಪಿಎಲ್ ಟೂರ್ನಿಯಿಂದಲೇ ಗೇಟ್ ಪಾಸ್ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿರುವ ಬಾಂಗ್ಲಾದೇಶ ತನ್ನ ರಾಷ್ಟ್ರದಲ್ಲಿ ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿತ್ತು. ಪಾಕಿಸ್ತಾನ ಕೂಡ ಈ ನಿರ್ಧಾರವನ್ನು ಬೆಂಬಲಿಸಿತ್ತು.

ಇದೀಗ ಬಾಂಗ್ಲಾದೇಶ ಮಾಹಿತಿ ಮತ್ತು ಪ್ರಸಾರ ಸಚಿವ ಜಹೀರ್ ಉದ್ದೀನ್ ಸ್ವಪನ್ , ತಾನು ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಲು ಬಯಸುವುದಿಲ್ಲ. ಹೀಗಾಗಿ ಐಪಿಎಲ್ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಅರ್ಜಿ ಸಲ್ಲಿಸಿದರೆ ಅದನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ. ಈ ಮೂಲಕ ಪಾಕ್ ಗೂ ಶಾಕ್ ನೀಡಿದೆ.

ಈಗಾಗಲೇ ಐಪಿಎಲ್ ನಿಂದ ಹಾಗೂ ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಂದ ದೂರ ಉಳಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಆರ್ಥಿಕ ಹೊಡೆತೆ ಬಿದ್ದಿದ್ದು, ಹೀಗಾಗಿ ಮತ್ತೆ ಬಿಸಿಸಿಐ ಜೊತೆ ಸಂಬಂಧ ಸರಿಮಾಡಿಕೊಳ್ಳಲು ಮುಂದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !