April 12, 2026
Sunday, April 12, 2026
spot_img

ವಿಕಸಿತ ಭಾರತದತ್ತ ಮಹಾ ಹೆಜ್ಜೆ: ಯುಪಿ ರೈತರು, ಯುವಕರ ಬಾಳಿಗೆ ‘ರೆಕ್ಕೆ’ ನೀಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಆರ್ಥಿಕ ಪ್ರಗತಿಯ ಪಥದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದೆ. ಜೇವರ್‌ನಲ್ಲಿ ನಿರ್ಮಾಣವಾಗಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಯೋಜನೆಯು ಕೇವಲ ಒಂದು ನಿಲ್ದಾಣವಲ್ಲ, ಬದಲಿಗೆ ‘ವಿಕಸಿತ ಭಾರತ’ದ ಸಂಕೇತ ಎಂದು ಬಣ್ಣಿಸಿದರು.

ಪಶ್ಚಿಮ ಉತ್ತರ ಪ್ರದೇಶದ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಯುವ ಪೀಳಿಗೆಗೆ ಈ ವಿಮಾನ ನಿಲ್ದಾಣವು ಸಾವಿರಾರು ಉದ್ಯೋಗ ಮತ್ತು ವ್ಯಾಪಾರೀ ಅವಕಾಶಗಳನ್ನು ತೆರೆಯಲಿದೆ.

ಆಗ್ರಾ, ಮಥುರಾ, ಮೀರತ್, ಗಾಜಿಯಾಬಾದ್ ಮತ್ತು ಇಟಾವಾದಂತಹ ನಗರಗಳಿಗೆ ಈ ನಿಲ್ದಾಣವು ನೇರ ಪ್ರಯೋಜನ ನೀಡಲಿದ್ದು, ಈ ಭಾಗದ ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳಿಗೆ ಆನೆಬಲ ಬಂದಂತಾಗಿದೆ.

ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿ ಉತ್ತರ ಪ್ರದೇಶ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಷಯ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

“ಇದು ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶದ ಹೊಸ ಗುರುತು. ಇಂದಿನ ಕಾರ್ಯಕ್ರಮವು ಭಾರತದ ಹೊಸ ಚೈತನ್ಯದ ಪ್ರತೀಕವಾಗಿದೆ.” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !