ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಕಲೇಟ್ ಆಸೆಯಿಂದಾಗಿ ನದಿಯಲಲಿ ಈಜಿಕೊಂಡು ಬಾಂಗ್ಲಾದೇಶದ ಬಾಲಕನೊಬ್ಬ ಭಾರತದ ಗಡಿ ಪ್ರವೇಶ ಮಾಡಿದ್ದಾನೆ. ಅನುಮತಿಯಿಲ್ಲದೆ ಗಡಿ ಪ್ರವೇಶ ಮಾಡಿದ್ದಕ್ಕೆ ಭಾರತೀಯ ಸೇನೆ ಬಾಲಕನನ್ನು ರಿಮಾಂಡ್ ರೂಂಗೆ ಕಳುಹಿಸಿದೆ.
ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಬ್ರಾಹ್ಮಣಬಾರಿಯಾ ಪ್ರದೇಶದ ಖಾಲ್ದನಾಡಿ ಗ್ರಾಮದ ಎಮಾನ್ ಹೊಸೈನ್ ಎಂಬ ಹುಡುಗನಿಗೆ ಭಾರತದಲ್ಲಿ ಸಿಗುವ ಚಾಕಲೇಟ್ ಅಂದರೆ ತುಂಬಾ ಇಷ್ಟವಂತೆ ಹಾಗಾಗಿ ಚಾಕೋಲೇಟ್ಗಾಗಿ ಶಾಲ್ದಾ ನದಿಯನ್ನು ದಾಟಿ ತ್ರಿಪುರಾದ ಸಿಪಹಿಜಾಲಾ ಜಿಲ್ಲೆಯ ಕಲಾಂಚೌರಾ ಗ್ರಾಮಕ್ಕೆ ಚಾಕೊಲೇಟ್ ಖರೀದಿ ಮಾಡಿ ಮತ್ತದೇ ದಾರಿಯಲ್ಲಿ ವಾಪಸಾಗುತ್ತಿದ್ದನಂತೆ.
ಪ್ರತಿಬಾರಿಯಂತೆ ಏಪ್ರಿಲ್ 13ರಂದು ಎಮಾನ್ ಹೊಸೈನ್ ಅವರು ಮತ್ತೆ ಭಾರತದ ಕಲಾಂಚೌರಾ ಗ್ರಾಮದ ಅಂಗಡಿಯಿಂದ ಚಾಕೊಲೇಟ್ ಖರೀದಿಸಲು ಮುಳ್ಳುತಂತಿ ಬೇಲಿ ಬಳಿ ರಂಧ್ರ ಕೊರೆದು ಅದರ ಮೂಲಕ ನುಸುಳಿದಾಗ ಬಿಎಸ್ಎಫ್ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ಅನುಮತಿಯಿಲ್ಲದೆ ದೇಶದ ಗಡಿ ದಾಟುವುದು ಅಪರಾಧ ಎಂದು ಹೇಳಿ ನ್ಯಾಯಾಲಯಕ್ಕೆ ಹಾಜರುಪಡಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭಾರತದಲ್ಲಿ ಸಿಗುವ ಚಾಕಲೇಟ್ ಗಳನ್ನು ಖರೀದಿಸಲು ಈತ ನದಿ ದಾಟಿದ್ದ ಎಂದು ತಿಳಿದು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಆತನ ಬಳಿ 100 ಬಾಂಗ್ಲಾದೇಶದ ಟಾಕಾ(ಕರೆನ್ಸಿ) ಮಾತ್ರ ಪತ್ತೆಯಾಗಿದೆ. ಬೇರೆ ಯಾವುದೇ ಅಕ್ರಮ ವಸ್ತುಗಳನ್ನು ದೊರೆತಿಲ್ಲ. ಆದರೆ ಪರವಾನಿಗೆ ಇಲ್ಲದೆ ದೇಶದ ಗಡಿ ದಾಟುವುದು ಅಪರಾಧ ಎಂಬ ಕಾರಣಕ್ಕೆ ಬಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು. .