ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಮಾತನಾಡೋದಿಲ್ಲ. ಇದು ಇಂಡಿಯಾ ಇಲ್ಲಿ ಹಿಂದಿ ಮಾತನಾಡುತ್ತೇನೆ ಎಂದು ಉದ್ಧಟತನ ತೋರಿದ್ದ ಬ್ಯಾಂಕ್ ಮ್ಯಾನೇಜರ್‌ಗೆ ತಕ್ಕ ಪಾಠ ಸಿಕ್ಕಿದೆ.
ಬೇರೆ ದೇಶಗಳಿಂದ ಕರ್ನಾಟಕಕ್ಕೆ ಬಂದ ಜನರೇ ಕನ್ನಡ ಕಲಿಯಲು ಪ್ರಯತ್ನ ಮಾಡುತ್ತಾರೆ. ಆದರೆ ಹೊರ ರಾಜ್ಯಗಳಿಂದ ಬಂದವರು ಕನ್ನಡ ಮಾತನಾಡದೇ ಉದ್ಧಟತನ ತೋರುತ್ತಾರೆ. ಅಂತವರಿಗೆ ಇದೊಂದು ನಿದರ್ಶನವಾಗಿದೆ.
ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಮಹಿಳಾ ಸಿಬ್ಬಂದಿ ಕನ್ನಡ ಮಾತನಾಡದೇ ಉದ್ದಟತನ ತೋರಿದ್ದು, ಅವರನ್ನು ಬೇರೆ ರಾಜ್ಯಕ್ಕೆ ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ.
ಕನ್ನಡಿಗರ ಹೋರಾಟಕ್ಕೆ ಹೆದರಿ ಹೊರ ರಾಜ್ಯಕ್ಕೆ ವರ್ಗಾವಣೆಗೊಳಿಸಿ ನಿನ್ನೆ ರಾತ್ರಿಯೇ ಆದೇಶ ಹೊರಡಿಸಿದೆ. ಕನ್ನಡ ಮಾತನಾಡದ ಮೇಲೆ ಕರ್ನಾಟಕದಲ್ಲಿ ಇರುವುದು ಸರಿಯಲ್ಲ ಎಂದು ಮನಗೊಂಡು ಹೊರ ರಾಜ್ಯಕ್ಕೆ ಆಕೆಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.