Thursday, December 18, 2025

CINE | ಥಿಯೇಟರ್​​ನಲ್ಲಿ ಬ್ಯಾನ್, ಪಾಕ್ ಡಿಜಿಟಲ್ ಲೋಕದಲ್ಲಿ ಅಬ್ಬರಿಸುತ್ತಿದೆ ‘ಧುರಂಧರ್’ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸ್ಪೈ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಇದೀಗ ಕಥೆಯಾಚೆಗೂ ಚರ್ಚೆಯ ಕೇಂದ್ರವಾಗಿದೆ. ಅಧಿಕೃತವಾಗಿ ನಿಷೇಧಿಸಿದ್ದರೂ, ಈ ಸಿನಿಮಾ ಪಾಕಿಸ್ತಾನದಲ್ಲಿ ಅನಿರೀಕ್ಷಿತ ರೀತಿಯಲ್ಲಿ ವ್ಯಾಪಕವಾಗಿ ವೀಕ್ಷಿಸಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡದಿದ್ದರೂ, ಡಿಜಿಟಲ್ ಮಾರ್ಗಗಳಲ್ಲಿ ಸಿನಿಮಾ ಹರಡುತ್ತಿರುವುದು ಪಾಕಿಸ್ತಾನಿ ಅಧಿಕಾರಿಗಳಿಗೆ ತಲೆನೋವಾಗುತ್ತಿದೆ.

ಪಾಕಿಸ್ತಾನ, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಆರು ಗಲ್ಫ್ ರಾಷ್ಟ್ರಗಳಲ್ಲಿ ‘ಪಾಕಿಸ್ತಾನ ವಿರೋಧಿ’ ನಿಲುವಿನ ಆರೋಪದ ಮೇಲೆ ಸಿನಿಮಾವನ್ನು ನಿಷೇಧಿಸಲಾಗಿದೆ. ಆದರೆ, ಶ್ರೀಲಂಕಾ, ನೇಪಾಳ ಹಾಗೂ ಮಲೇಷ್ಯಾದಲ್ಲಿನ ಸರ್ವರ್‌ಗಳ ಮೂಲಕ ಡಾರ್ಕ್ ವೆಬ್ ಲಿಂಕ್‌ಗಳನ್ನು ಬಳಸಿ ಪಾಕಿಸ್ತಾನಿ ಪ್ರೇಕ್ಷಕರು ಕಡಿಮೆ ಗುಣಮಟ್ಟದ ಕ್ಯಾಮ್-ಪ್ರಿಂಟ್ ಆವೃತ್ತಿಗಳನ್ನು ವೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಚೀನೀ ಹೋಸ್ಟಿಂಗ್ ವೆಬ್‌ಸೈಟ್‌ಗಳಲ್ಲಿಯೂ ಸಿನಿಮಾ ಲಭ್ಯವಾಗಿದೆ ಎಂಬ ಮಾಹಿತಿ ಇದೆ.

ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಭಾರತೀಯ ಗೂಢಚಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದ ಲಿಯಾರಿ ಪ್ರದೇಶವನ್ನು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗಿ ಚಿತ್ರಿಸಿರುವುದೇ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಪಿಪಿಪಿ ಕಾರ್ಯಕರ್ತನೊಬ್ಬ ಕರಾಚಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾನೆ ಎನ್ನಲಾಗಿದೆ.

error: Content is protected !!