ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಟ್ವಾಳದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸರಪಾಡಿ ಪ್ರಖಂಡ ಸಮಿತಿ ವತಿಯಿಂದ ಇತ್ತೀಚೆಗೆ ನಿಧನರಾದ ಬಜರಂಗದಳ ಸಕ್ರಿಯ ಕಾರ್ಯಕರ್ತರಾದ ವಿಜಯ್ ಪುಣ್ಕೆದಡಿ, ಸುರೇಶ್ ಮೇಗಿನಮನೆ,ನಿತಿನ್ ಪೂಜಾರಿ ನೆಲ್ಯಪಲ್ಕೆ ಅವರ ಸವಿನೆನಪಿಗಾಗಿ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಈ ಕ್ಷಣ ಸುಮಾರು 270 ಜನ ರಕ್ತದಾನಿಗಳು ರಕ್ತದಾನ ಮಾಡಿದರು.
ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಸರಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷಡಾ.ಕೃಷ್ಣಪ್ರಸನ್ನ ಪುತ್ತೂರು, ಬಜರಂಗದಳದ ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್, ಗುರುರಾಜ್ ಬಂಟ್ವಾಳ್, ಸಂತೋಷ್ ಸರಪಾಡಿ, ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಬಜರಂಗದಳದ ಪ್ರಖಂಡ ಸಂಯೋಜಕ್ ಶಿವಪ್ರಸಾದ್ ತುಂಬೆ, ಕಿರಣ್ ಕಾಪಿಕಾಡ್, ಪ್ರಸಾದ್ ಬೆಂಜನಪದವು, ಚಂದ್ರ ಕಲಾಯಿ, ಸಂದೇಶ್ ಕಾಡಬೆಟ್ಟು, ಖಂಡ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.