ಪಾಂಡವಪುರದಲ್ಲಿ ಬಾರ್ ಕ್ಯಾಷಿಯರ್ ನೇಣು ಬಿಗಿದು ಆತ್ಮಹತ್ಯೆ

ಹೊಸದಿಗಂತ ವರದಿ, ಶ್ರೀರಂಗಪಟ್ಟಣ :

ಬಾರ್ ಅಂಡ್ ರಸ್ಟೋರೆಂಟ್ ವೊಂದರಲ್ಲಿ ಕ್ಯಾಷಿಯರ್ ಹಾಗೂ ಮ್ಯಾನೇಜರ್ ಆಗಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡವಪುರ ತಾಲೂಕಿನ ಮಂಚನಹಳ್ಳಿ ಗ್ರಾಮದ ಬಳಿ ನಡೆದಿದೆ.

ಮಂಡ್ಯ ಬಸರಾಳು ಗ್ರಾಮದ ಬೊರೇಗೌಡ (53) ಈತ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ. ಕೆ.ಆರ್.ಪೇಟೆ-ಮೈಸೂರು ಮುಖ್ಯ ರಸ್ತೆ, ಮಂಚನಹಳ್ಳಿ ಬಳಿ ಇರುವ ಮಾಣಿಕ್ಯ ಬೋರ್ಡಿಂಗ್ ಲಾಡ್ಜಿಂಗ್ ಮತ್ತು ರೆಸ್ಟೋರೆಂಟ್‌ನಲ್ಲಿ ಕ್ಯಾಷಿಯರ್ ಹಾಗೂ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದು. ಶನಿವಾರ ಬೆಳಿಗ್ಗೆ ನನ್ನ ಸಾವಿಗೆ ನಾನೇ ಕಾರಣ, ತಮ್ಮ ಜಮೀನನ್ನು ಸಮಭಾಗ ಮಾಡಿ ಸಹೋದರರಿಗೆ ಹಂಚುವಂತೆ ಡೆತ್ ನೋಟ್ ಬಡೆದಿಟ್ಟು. ಕಟ್ಟಡ ಮೇಲಂತಸ್ಥಿನ ರೂಂ ಒಂದರ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಮೃತರ ಪತ್ನಿ ನೀಡಿರುವ ದೂರಿನ ಮೇರೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!