ಹೊಸದಿಗಂತ ವರದಿ, ಮಂಡ್ಯ:
ವಿದ್ಯಾರ್ಥಿನಿಯೊಬ್ಬಳು ಅಲ್ಲು ಹು ಅಕ್ಬರ್ ಎಂಬ ಘೋಷಣೆ ಕೂಗಿ ಧರ್ಮ ಸಂಘರ್ಷಕ್ಕೆ ನಾಂದಿ ಹಾಡಿದ್ದ ಬೆನ್ನ ಹಿಂದೆಯೇ ಇದೀಗ ಮುಸ್ಲಿಂ ಮಕಾನ್ (ಸ್ಮಶಾನ) ವಿಚಾರವಾಗಿ ಮತ್ತೊಂದು ಸ್ವರೂಪದ ಧರ್ಮ ಸಂಘರ್ಷ ಶುರುವಾಗಿದೆ.
ಹಿಂದೂ ವ್ಯಕ್ತಿಯೊಬ್ಬನ ಶವವನ್ನು ಮುಸ್ಲಿಂ ಮಕಾನ್ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಪೊಲೀಸರು ತಡೆಯೊಡ್ಡಿದ ಪರಿಣಾಮ ಹೆದ್ದಾರಿಯಲ್ಲೇ ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಹೊಸಬೂದನೂರಿನಲ್ಲಿ ಗುರುವಾರ ನಡೆದಿದೆ.
ಘಟನೆ ವಿವರ :
ತಾಲೂಕಿನ ಹೊಸಬೂದನೂರು ಗ್ರಾಮದ ಮುನಿಯ ಎಂಬ ವ್ಯಕ್ತಿ ಮೃತಪಟ್ಟಿದ್ದಘಿ. ಈತನ ಅಂತ್ಯಸಂಸ್ಕಾರ ನಡೆಸಲು ಮುಸ್ಲಿಮರಿಗೆ ಮಂಜೂರಾಗಿದ್ದ ಮಕಾನ್ ಜಾಗಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಈ ಬಗ್ಗೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಂತ್ಯಸಂಸ್ಕಾರ ನಡೆಸದಂತೆ ತಡೆಯೊಡ್ಡಿದರು. ಇದರಿಂದ ಬೇಸತ್ತ ಮೃತನ ಕಡೆಯುವರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶವ ಇಟ್ಟು ರಸ್ತೆ ತಡೆ ನಡೆಸಿದರು.
ಗ್ರಾಮಸ್ಥರು ಮೃತಪಟ್ಟರೆ ಹಿಂದಿನಿಂದಲೂ ಸರ್ಕಾರಿ ಜಾಗದಲ್ಲೇ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತುಘಿ. 2017ರಲ್ಲಿ ಸರ್ಕಾರಿ ಜಮೀನನ್ನು ಮುಸ್ಲಿಂ ಮಕಾನ್ ಎಂದು ಬದಲಾವಣೆ ಮಾಡಿ 1.13 ಎಕರೆ ಜಮೀನನ್ನು ರಾಜ್ಯ ವಕ್ಫ್ ಮಂಡಳಿಗೆ ಖಾತೆ ಬದಾವಣೆ ಮಾಡಿ ಅಂದಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಜಿಲ್ಲಾಧಿಕಾರಿ ಆದೇಶದ ವಿರುದ್ಧ ಬೂದನೂರು ಗ್ರಾಮಸ್ಥರು ಹೋರಾಟ ನಡೆಸಿದ್ದರು. ಆದರೂ ಯಾವುದೇ ಬದಲಾವಣೆ ಆಗಿರಲಿಲ್ಲಘಿ. ಕೋಮು ಸಂಘರ್ಷಕ್ಕೆ ನಾಂದಿ ಹಾಡಬಹುದು ಎಂಬ ಕಾರಣಕ್ಕೆ ಪೊಲೀಸರು ಈ ಜಮೀನಿನಲ್ಲಿ ಯಾವುದೇ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುತ್ತಿರಲಿಲ್ಲಘಿ. ಗ್ರಾಮದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಹಿಂದೂಗಳು ವಾಸವಿದ್ದಾರೆ. ಆದರದೆ ಒಂದೇ ಒಂದು ಮುಸ್ಲಿಂ ಕುಟುಂಬವೂ ವಾಸವಿಲ್ಲಘಿ. ಆದರೂ ಜಿಲ್ಲಾಧಿಕಾರಿ ಈ ಜಮೀನನ್ನು ಮಕಾನ್‌ಗೆ ಮಂಜೂರು ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇಡೀ ಗ್ರಾಮಕ್ಕೆ ಇರುವುದು ಇದೊಂದು ಸ್ಮಶಾನ. ಸುತ್ತಮುತ್ತಲಿನ 15 ಗ್ರಾಮಗಳಲ್ಲೂ ಹಿಂದೂಗಳನ್ನು ಹೊರತುಪಡಿಸಿ ಬೇರೆ ಧರ್ಮಿಯರು ವಾಸವಿಲ್ಲಘಿ. ಮಕಾನ್‌ಗೆ ನೀಡಲಾದ ಜಮೀನನ್ನು ಬದಲಿಸಿ ಹಿಂದೂ ಸ್ಮಶಾನಕ್ಕೆ ಮೀಸಲಿಡುವಂತೆ ಒತ್ತಾಯಿಸಿದರು.
ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥವಾಗಿತ್ತು. ಸುಗಮ ಸಂಚಾರಕ್ಕೆ ಪೊಲೀಸರು ಪರದಾಡುವಂತಾಗಿತ್ತು. ಕಿಲೋಮೀಟರ್‌ಗಟ್ಟಲೆ ವಾಹನಗಳ ಸಾಲು ಕಂಡುಬಂತು. ರಸ್ತೆಯಲ್ಲಿದ್ದ ಶವವನ್ನು ಪಕ್ಕಕ್ಕೆ ಸರಿಸಿ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಪೊಲೀಸರು ಹರಸಾಹಸಪಟ್ಟರು.