ಬರೋಬ್ಬರಿ ಏಳು ಗಂಟೆ ತಡವಾಗಿ ಬಂದ ಬಸವ ಎಕ್ಸ್‌ಪ್ರೆಸ್‌ ರೈಲು, ಪ್ರಯಾಣಿಕರ ಪರದಾಟ

ಹೊಸದಿಗಂತ ವರದಿ ಕಲಬುರಗಿ:

ನಿಗದಿತ ವೇಳೆಗೆ ಬರಬೇಕಿದ್ದ ಬೆಂಗಳೂರು ಮತ್ತು ಕಲಬುರಗಿ ನಡುವೆ ಸಂಚರಿಸುವ ಬಸವ ಎಕ್ಸ್ಪ್ರೆಸ್ ರೈಲು ಕಳೆದ ರಾತ್ರಿ 7 ಗಂಟೆ ತಡವಾಗಿ ಬಂದ ಹಿನ್ನೆಲೆ, ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಸೇರಿ ಚಿಕ್ಕ ಚಿಕ್ಕ ಮಕ್ಕಳು ಪರದಾಡಿದ ಪ್ರಸಂಗ ನಡೆದಿದೆ.

ಬಾಗಲಕೋಟೆ-ಮೈಸೂರು ಮಧ್ಯೆ ಸಂಚರಿಸುವ, ಕಲಬುರಗಿ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಬಸವ ಎಕ್ಸ್ಪ್ರೆಸ್ ರೈಲು ದಿನನಿತ್ಯ ತನ್ನ ನಿಗಧಿತ ಸಮಯವಾದ 9:15 ಕ್ಕೆ ಬರಬೇಕಿತ್ತು.ಆದರೆ, 7 ಗಂಟೆಗಳಿಗೂ ಅಧಿಕ ತಡವಾಗಿ ಅಂದರೆ ಬೆಳಗ್ಗಿನ 4:30ಕ್ಕೆ ರೈಲು ಬಂದ ಹಿನ್ನೆಲೆ, ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.

ಬಸವ ಎಕ್ಸ್ಪ್ರೆಸ್ ಪ್ರಯಾಣ ಬೆಳೆಸುವ ಪ್ರಯಾಣಿಕರು ರೈಲಿನ ಸಮಯವಾಗಿದೆ,ಯಾಕೆ ಬರುತ್ತಿಲ್ಲ ಅಂತ ರೈಲ್ವೆ ಅಧಿಕಾರಿಗಳಿಗೆ ಕೇಳಿದಾಗ,ಹತ್ತು ಹದಿನೈದು ನಿಮಿಷಗಳಲ್ಲಿ ಬರಲಿದೆ ಎಂಬ ಹೇಳುತ್ತಾ ಹೋಗಿದ್ದು, ಕೊನೆಗೆ ಬರೋಬ್ಬರಿ 7 ಗಂಟೆ ತಡವಾಗಿ ರೈಲು ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ.

ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಪ್ರಮಾಣ ಬೆಳೆಸುತ್ತಿದ್ದ ಕುಟುಂಬಗಳು ರಾತ್ರಿಯಿಡೀ ರೈಲಿಗಾಗಿ ಕಾಯ್ದಿದ್ದು, ರೈಲ್ವೆ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!