ಜೀವಕ್ಕೆ ಕುತ್ತು ತಂದ ಯುದ್ಧ: ಇಸ್ರೇಲ್-ಹಮಾಸ್ ಕದನದಲ್ಲಿ ಒಟ್ಟು 79 ಪತ್ರಕರ್ತರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷದಲ್ಲಿ ಕಳೆದ ಅಕ್ಟೋಬರ್ 7 ರಿಂದ ಇದುವೆರೆಗೆ ಕನಿಷ್ಟ 79 ಪತ್ರಕರ್ತರು ಮೃತರಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಿರುವುದಾಗಿ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಹೇಳಿದೆ.

ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್(ಆರ್‌ಎಸ್‌ಎಫ್) ಹೆಸರಿನ ಪತ್ರಕರ್ತರ ಹಿತರಕ್ಷಣಾ ಸಂಘಟನೆಯು ಕಳೆದ ನವೆಂಬರ್‌ನಲ್ಲಿ ಐಸಿಸಿಗೆ ದೂರು ಸಲ್ಲಿಸಿ, ಯುದ್ಧ ವರದಿ ಮಾಡುತ್ತಿದ್ದಾಗ ಪತ್ರಕರ್ತರ ವಿರುದ್ಧದ ನಡೆದ ಯುದ್ಧಾಪರಾಧ ಹಾಗೂ ಪತ್ರಕರ್ತರ ಸಾವಿನ ಕುರಿತು ತನಿಖೆ ನಡೆಸಲು ಆಗ್ರಹಿಸಿತ್ತು. ಇದಕ್ಕೆ ಪ್ರತಿಯಾಗಿ ಎಲ್ಲಾ ಪತ್ರಕರ್ತರ ಸಾವಿನ ಸಂದರ್ಭಗಳನ್ನು ಸೂಕ್ತ ತನಿಖೆ ನಡೆಸಲಾಗುವುದು. ಆದರೆ ಗಾಝಾದಲ್ಲಿ ನಡೆದಿರುವ ವ್ಯಾಪಕ ವಿನಾಶ ಹಾಗೂ ಕೆಲವು ಪತ್ರಕರ್ತರ ಕುಟುಂಬದ ಸದಸ್ಯರ ಹತ್ಯೆ ತನಿಖೆಗೆ ತುಸು ಅಡ್ಡಿಯಾಗಿದೆ. ಅದಾಗ್ಯೂ ತನಿಖೆ ನಡೆಯುತ್ತಿದೆ ಎಂದು ಐಸಿಸಿ ಹೇಳಿದೆ.

ಗಾಝಾದಲ್ಲಿ ಅತೀ ಹೆಚ್ಚು ಪತ್ರಕರ್ತರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಪತ್ರಕರ್ತರು, ಮಾಧ್ಯಮ ಸಿಬಂದಿಗಳಲ್ಲಿ ಹೆಚ್ಚಿನವರು ಪ್ಯಾಲೇಸ್ತೀನಿಯರು. ಪತ್ರಕರ್ತರ ವಿರುದ್ಧದ ಅಪರಾಧವನ್ನು ಫೆಲೆಸ್ತೀನ್ ಕುರಿತು ತಾನು ನಡೆಸುವ ತನಿಖೆಯಲ್ಲಿ ಸೇರಿಸಿರುವುದಾಗಿ ಐಸಿಸಿ ದೃಢಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!