ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಘನತ್ಯಾಜ್ಯ ನಿರ್ವಹಣಾ ಘಟಕದ ವಿರುದ್ಧ ಕ್ಲೀನರ್‌ಗಳು ಮತ್ತು ಚಾಲಕರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಇದರ ಪರಿಣಾಮ 5,300 ಆಟೋ ಟಿಪ್ಪರ್‌ಗಳು ಮತ್ತು 700 ಕಸದ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ.
ಬಿಬಿಎಂಪಿ ಮುಖ್ಯ ಕಚೇರಿ ಬಳಿ ನೂರಾರಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಹಲವರನ್ನು ವಶಕ್ಕೆ ಪಡೆದರು. ನಂತರ ಸಂಜೆ ವೇಳೆ ಬಿಡುಗಡೆ ಮಾಡಿದರು.
ಐಪಿಡಿ ಸಾಲಪ್ಪ ವರದಿಯನ್ನು ಜಾರಿಗೆ ತರಬೇಕು ಮತ್ತು ಘನತ್ಯಾಜ್ಯ ವಿಲೇವಾರಿ ಮಾಡುವ ಚಾಲಕರ ಸೇವೆಯನ್ನು ಶಾಶ್ವತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಿಬಿಎಂಪಿ ಕಾರ್ಯಕರ್ತರು ಮತ್ತು ಚಾಲಕರನ್ನು ನಿರ್ಲಕ್ಷಿಸಿದೆ. ಗುತ್ತಿಗೆದಾರರ ಮೂಲಕ ನೇಮಕ ಮಾಡಿಕೊಳ್ಳುವ ಬದಲು ಅವರನ್ನು ‘ನೇರ ಪಾವತಿ’ ಯೋಜನೆಯಡಿ ನೇಮಿಸಿಕೊಳ್ಳಬೇಕು ಎಂದಿದ್ದಾರೆ.