ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಐಟಿ ಇಲಾಖೆಯ ಅಧಿಕಾರಿಗಳಿಂದ ದಾಳಿ ಮಾಡಿದಾಗ ಮನೆಯಲ್ಲಿ 50 ಕೋಟಿ ರೂ. ಕಪ್ಪು ಹಣದ ಸಮೇತವಾಗಿ ಸಿಕ್ಕಿಬಿದ್ದಿದ್ದ ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಬಿಬಿಎಂಪಿ ಕಂಟ್ರ್ಯಾಕ್ಟರ್ ಅಂಬಿಕಾಪತಿ ನಿಧನ ಸೋಮವಾರ ಆಸ್ಪತ್ರೆಯಲ್ಲಿ ಕೊನೆ ಉಸಿರನ್ನೆಳೆದಿದ್ದಾರೆ. ಆರೋಗ್ಯ ತೀವ್ರ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಐಟಿ ರೈಡ್‌ನ ವೇಳೆ ಸುಮಾರು 50 ಕೋಟಿ ರೂ. ಕಂತೆ ಕಂತೆ ಹಣದ ಸಮೇತ ಸಿಕ್ಕಿಬಿದ್ದಿದ್ದ ಅಂಬಿಕಾಪತಿ ರಾಜ್ಯಾದ್ಯಂತ ತೀವ್ರ ಸುದ್ದಿಯಾಗಿದ್ದರು. ಈ ವೇಳೆ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿದ್ದ 50 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು.