ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆ ಬಂದರೆ ಕೆರೆಯಂತಾಗುವ ಬೆಂಗಳೂರಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳಲು BBMP ದಿನಕ್ಕೊಂದು ಹೊಸ ಪ್ರಯೋಗ ಮಾಡುತ್ತಿದೆ. ಬಿಬಿಎಂಪಿ ಇದೀಗ ಮಳೆ ಹಾನಿ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್ ಮೊರೆಹೋಗಲು ಮುಂದಾಗಿದೆ.
ಮಳೆ ಬಂದಾಗ ಜಲಾವೃತ ಆಗುವ ಪ್ರದೇಶಗಳು ಹಾಗೂ ಮಳೆಹಾನಿ ಪ್ರದೇಶಗಳಲ್ಲಿ ಡ್ರೋನ್ ಹಾರಿಸಿ ಮಾಹಿತಿ ಕಲೆ ಹಾಕಲು ಪ್ಲಾನ್ ಮಾಡುತ್ತಿದೆ.
ಸದ್ಯ ಪೊಲೀಸ್ ಇಲಾಖೆಯ ಜೊತೆ ಸೇರಿ ಡ್ರೋನ್ ಕಾರ್ಯಾಚರಣೆ ಮೂಲಕ ಮಳೆ ಹಾನಿ ಪ್ರದೇಶಗಳ ಪತ್ತೆಗೆ ಚಿಂತನೆ ನಡೆಸಲಾಗಿದೆ. ಡ್ರೋನ್ ಹಾರಾಟ ನಿರ್ವಹಣೆಗೆ ಪೊಲೀಸ್ ಹಾಗೂ ಬಿಬಿಎಂಪಿಯ ಅಧಿಕಾರಿಗಳ ತಂಡದಿಂದ ನೋಡಲ್ ಆಫೀಸರ್ಗಳನ್ನು ನೇಮಿಸಲಾಗಿದೆ. ಡ್ರೋನ್ ಮೂಲಕ ಬಿಬಿಎಂಪಿಯ ಕಂಟ್ರೋಲ್ ರೂಮ್ನಲ್ಲಿ ಕುಳಿತುಕೊಂಡೇ ಮಾಹಿತಿ ಕಲೆಹಾಕಲು ಉದ್ದೇಶಿಸಲಾಗಿದೆ.