ಬಿಬಿಎಂಪಿ ಹೊಸ ಪ್ಲ್ಯಾನ್‌, ಇನ್ಮುಂದೆ ಕ್ಯೂಆರ್ ಕೋಡ್​ನಲ್ಲೇ ಸಿಗಲಿದೆ ನಮ್ಮ ಕ್ಲಿನಿಕ್ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಮ್ಮ ಕ್ಲಿನಿಕ್‌ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ, ಅವುಗಳ ಸೇವೆ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.

ಇದಕ್ಕಾಗಿ ಹೊಸ ತಂತ್ರವನ್ನೂ ಪಾಲಿಕೆ ಅನುಸರಿಸಲಿದೆ. ಸದ್ಯ ಬೆಂಗಳೂರಿನ ಎಂಟು ವಲಯಗಳಲ್ಲಿ ನಮ್ಮ ಕ್ಲಿನಿಕ್​ಗಳನ್ನ ಜನರ ಬಳಕೆಗೆ ಸಿಗುವಂತೆ ಮಾಡಲು ಚಿಂತನೆ ನಡೆಸಿರುವ ಬಿಬಿಎಂಪಿಯ ಆರೋಗ್ಯ ವಿಭಾಗ, ಪ್ರತಿ ವಾರ್ಡ್​ನಲ್ಲೂ ಕ್ಯೂಆರ್ ಕೋಡ್ ಅಳವಡಿಸಲು ಸಜ್ಜಾಗಿದೆ.

ಕ್ಯೂಆರ್ ಕೋಡ್ ಮೂಲಕ ಆಯಾ ವಾರ್ಡ್​ಗಳಲ್ಲಿ ನಮ್ಮ ಕ್ಲಿನಿಕ್ ಎಲ್ಲಿದೆ, ಅಲ್ಲಿ ಸಿಗೋ ಸೌಲಭ್ಯಗಳೇನು ಎಂಬ ಬಗ್ಗೆ ಜನರಿಗೆ ಮಾಹಿತಿ ಒದಗಿಸಲು ಪಾಲಿಕೆ ಸಿದ್ಧತೆ ನಡೆಸಿದೆ.

ರಾಜಧಾನಿಯ ವಾರ್ಡ್​ಗಳಲ್ಲಿರುವ ನಮ್ಮ ಕ್ಲಿನಿಕ್​ಗಳಲ್ಲಿ ಏನೆಲ್ಲ ಸೌಲಭ್ಯ ಸಿಗಲಿದೆ ಎಂಬ ಬಗ್ಗೆ ಪಾಲಿಕೆ ಜನರಿಗೆ ಮಾಹಿತಿ ಒದಗಿಸಲಿದೆ. ಕ್ಯೂಆರ್ ಕೋಡ್ ಜೊತೆಗೆ ಆಯಾ ವಲಯದಲ್ಲಿರುವ ನಮ್ಮ ಕ್ಲಿನಿಕ್​ಗಳಲ್ಲಿ ಇರುವ ವೈದ್ಯರ ಮಾಹಿತಿ, ವೈದ್ಯರ ಫೋಟೋವನ್ನು ಕೂಡ ಪ್ರಕಟಿಸುವ ಮೂಲಕ ಜನರಿಗೆ ನಮ್ಮ ಕ್ಲಿನಿಕ್ ಬಳಕೆ ಮಾಡಿಕೊಳ್ಳುವಂತೆ ಜಾಗೃತಿ ನೀಡಲು ಮುಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!