ಐಪಿಎಲ್‌ ಫೈನಲ್‌ ಪಂದ್ಯದ ಸಮಾರೋಪ ಸಮಾರಂಭಕ್ಕೆ ವಿಶೇಷ ನಿರ್ಧಾರ ಕೈಗೊಂಡ BCCI

ಹೊಸದಿಗಂತ ಡಿಜಿಟಲ್ ಡೆಸ್ಕ್:

18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 25 ಟೂರ್ನಿ ಇನ್ನೇನು ಕೊನೆಯ ಹಂತಕ್ಕೆ ತಲುಪಿದೆ. ಇಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ನಡುವೆ ಕೊನೆಯ ಪಂದ್ಯ ನಡೆಯಲಿದೆ.

ಜೂನ್‌ 3ರಂದು ನಡೆಯಲಿರುವ ಐಪಿಎಲ್‌ ಫೈನಲ್‌ ಪಂದ್ಯದ ಸಮಾರೋಪದಲ್ಲಿ ʻಆಪರೇಷನ್ ಸಿಂದೂರ’ ವಿಜಯೋತ್ಸವ ಆಚರಿಸಲು ಬಿಸಿಸಿಐ ನಿರ್ಧರಿಸಿದೆ.

Operation Sindoor Tribute

ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನ ಹತ್ಯೆಗೈಯಲಾಗಿತ್ತು. ಇದಕ್ಕೆ ʻಆಪರೇಷನ್‌ ಸಿಂದೂರ’ ಕಾರ್ಯಾಚರಣೆ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಪಾಕಿಸ್ತಾನದ ದಾಳಿಗಳನ್ನ ವಿಫಲಗೊಳಿಸಿತ್ತು. ಭಾರತೀಯ ಸೇನೆಯ ಈ ಕಾರ್ಯವನ್ನು ಗೌರವಿಸುವ ಸಲುವಾಗಿ ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂದೂರ’ ವಿಜಯೋತ್ಸವ ಆಚರಿಸಲು ನಿರ್ಧರಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!