ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025 ಚಾಂಪಿಯನ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಲಾಗಿದ್ದ ಟ್ರೋಫಿಯನ್ನು ಹಿಂಪಡೆಯಲಾಗಿದೆ.
7 ವರ್ಷಗಳ ಬಳಿಕ ಬೆಂಗಳೂರು ತಂಡ ಟ್ರೋಫಿ ಗೆದ್ದುಕೊಂಡಿದೆ. ಆದ್ರೆ ಹಿಂಪಡೆದಿದ್ದು ಏಕೆ ಎಂಬ ಪ್ರಶ್ನೆಗಳು ಈಗಾಗಲೇ ಎಲ್ಲರ ಮನದಲ್ಲಿ ಹುಟ್ಟಿಕೊಂಡಿರಬೇಕು. ಬಿಸಿಸಿಐ ಐಪಿಎಲ್ ಟ್ರೋಫಿ ಹಿಂಪಡೆದಿದ್ದು ಕೇವಲ ಆರ್ಸಿಬಿ ಕಡೆಯಿಂದ ಮಾತ್ರವಲ್ಲ ಈ ಹಿಂದೆ ಗೆದ್ದಿರುವ ಎಲ್ಲಾ ತಂಡಗಳಿಂದಲೂ ಟ್ರೋಫಿಗಳನ್ನು ವಾಪಸ್ ಪಡೆದುಕೊಂಡಿದೆ.
ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್ನಲ್ಲಿ ಯಾವುದೇ ತಂಡಗಳು ಗೆಲುವು ಸಾಧಿಸಿದ ಮೇಲೆ ಒರಿಜಿನಲ್ ಟ್ರೋಫಿಯನ್ನು ನೀಡಲಾಗುತ್ತದೆ. ಆ ಬಳಿಕ ಇಂತಿಷ್ಟು ಸಮಯದ ಬಳಿಕ ಅದನ್ನು ವಾಪಸ ಪಡೆದು ಅದೇ ಮಾದರಿಯ ರಿಪ್ಲಿಕಾ ಟ್ರೋಫಿಯನ್ನು ತಂಡಗಳಿಗೆ ನೀಡಲಾಗುತ್ತದೆ.