ಹುಣ್ಣಿಗೆರೆ ವಸತಿ ಯೋಜನೆಯ 80 ವಿಲ್ಲಾಗಳ ಹರಾಜಿಗೆ ಬಿಡಿಎ ಸಜ್ಜು, ರೇಟ್‌ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದಾಸನಪುರ ಹೋಬಳಿಯ ಹುಣ್ಣಿಗೆರೆ ಗ್ರಾಮದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಮನೆಗಳ ಮಾದರಿಯ 80 ವಿಲ್ಲಾಗಳ ಹರಾಜಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಜ್ಜಾಗಿದೆ.

ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವಿನ ದಾಸನಪುರ ಹೋಬಳಿಯಲ್ಲಿರುವ ಈ ಯೋಜನೆಯು 322 ವಿಲ್ಲಾಗಳನ್ನು ಹೊಂದಿದೆ.

ಈ ಯೋಜನೆಯು 172 4BHK ಮತ್ತು 150 3BHK ವಿಲ್ಲಾಗಳನ್ನು ಒಳಗೊಂಡಿದೆ ಮತ್ತು ಆರು ತಿಂಗಳ ಹಿಂದೆ ಮಾರಾಟ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ ಅಂತಿಮವಾಗಿ ಈಗ ಹರಾಜಿಗೆ ನಿರ್ಧರಿಸಿದೆ.

4BHK ಗೆ ಅತ್ಯಧಿಕ ಬಿಡ್ 1.35 ಕೋಟಿ ರೂ.ಗಳಾಗಿದ್ದರೆ, 3BHK ಗೆ ಗರಿಷ್ಠ ಬಿಡ್ 1.14 ಕೋಟಿ ರೂ.ಗಳಾಗಿತ್ತು. ಈ ಫಲಿತಾಂಶ ಉತ್ತೇಜನಕಾರಿಯಾಗಿದೆ ಮತ್ತು ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾವು ಈಗ ಈ ಅಂಕಿಅಂಶಗಳನ್ನು ವಿಲ್ಲಾಗಳ ವೆಚ್ಚವಾಗಿ ನಿಗದಿಪಡಿಸಲು ನಿರ್ಧರಿಸಿದ್ದೇವೆ ಎಂದು ಡಿಪಾರ್ಟ್‌ಮೆಂಟ್‌ ಮಾಹಿತಿ ನೀಡಿದೆ.

ಬಿಡಿಎ ಶೀಘ್ರದಲ್ಲೇ 80 ವಿಲ್ಲಾಗಳನ್ನು ಹರಾಜು ಹಾಕಲಿದ್ದು, ಅವುಗಳಲ್ಲಿ 50 4BHK ಇವೆ. ಈ ಸಂಬಂಧ ಪ್ರಸ್ತಾವನೆಯನ್ನು ಬಿಡಿಎ ಆಯುಕ್ತರಿಗೆ ಕಳುಹಿಸಲಾಗಿದೆ ಮತ್ತು ಅವರ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಎಲ್ಲಾ ಮನೆಗಳಿಗೆ ಪಾರ್ಕಿಂಗ್ ಸ್ಥಳದಲ್ಲಿ ಇವಿ ಚಾರ್ಜಿಂಗ್ ಸೌಲಭ್ಯ, ಡ್ಯುಯಲ್ ಪೈಪ್‌ಲೈನ್ ವ್ಯವಸ್ಥೆ, ಈಜುಕೊಳದೊಂದಿಗೆ ಮನರಂಜನಾ ಕೇಂದ್ರ, ಬ್ಯಾಡ್ಮಿಂಟನ್ ಕೋರ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರ, ಎರಡು ರೆಸ್ಟೋರೆಂಟ್‌ಗಳು ಇವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!