ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನ್ ಕಂಟ್ರೋಲ್ಡ್ ಕ್ರೌಡ್ ಆಯ್ತು. ಹೀಗಾಗಿ, ತೆರೆದ ವಾಹನದಲ್ಲಿ ವಿಜಯೋತ್ಸವ ಮೆರವಣಿಗೆ ರದ್ದು ಮಾಡಿದ್ದೆವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಲ್ತುಳಿತ ದುರಂತ ಕುರಿತು ಮಾತನಾಡಿದ ಡಿಕೆಶಿ, ಪರಿಸ್ಥಿತಿ ಬಗ್ಗೆ ವಿಮಾನ ನಿಲ್ದಾಣದಲ್ಲೇ ಗಮನಿಸಿದ್ದೆವು. ಅದಕ್ಕೆ ನಾವು ಮೆರವಣಿಗೆಯನ್ನು ರದ್ದು ಮಾಡಿ, ಕ್ಲೋಸ್ ವಾಹನದಲ್ಲಿ ಆಟಗಾರರನ್ನು ಕರೆತಂದೆವು. ಆದರೂ, ಅವರ ಮನವಿ ಇತ್ತು. ವಿಧಾನಸೌಧದಿಂದಲಾದರೂ ಬರಬೇಕು ಅಂತ. ಮಳೆ ಬಂದು ಕ್ರೌಡ್ ಅನ್ ಕಂಟ್ರೋಲ್ ಆಯಿತು ಎಂದು ಹೇಳಿದರು.
ಸಾವು-ನೋವಿನ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಕೂಡ ಆಸ್ಪತ್ರೆಗೆ ಹೋಗ್ತೀನಿ. ಅಧಿಕೃತ ಸಾವಿನ ಮಾಹಿತಿ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.