ಮಾರುಕಟ್ಟೆಗೆ ಬಣ್ಣ ಬಣ್ಣದ ಆಕರ್ಷಕ ಶೂ ಗಳು ಲಗ್ಗೆ ಇಟ್ಟು ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತವೆ. ಆದರೆ ಈ ಋತುವಿನಲ್ಲಿ ಶೂ ಧರಿಸುವುದು ಎಷ್ಟು ಸೂಕ್ತ?
ಬೇಸಿಗೆಯಲ್ಲಿ, ಪಾದಗಳಿಗೆ ಉಸಿರಾಡಲು ಅವಕಾಶ ಕೊಡಿ ಹೆಚ್ಚಿನವರು ದಿನಾಪೂರ್ತಿ ಶೂ ಹಾಕಿಕೊಂಡಿರುತ್ತಾರೆ. ಮನೆಗೆ ಬಂದ ಮೇಲೆ ಮತ್ತೆ ಸಾಕ್ಸ್ ಹಾಕಿ ಕೊಂಡು ಓಡಾಡಬೇಡಿ. ಬಿಸಿಲು ಮತ್ತು ಶಾಖದಿಂದಾಗಿ ಪಾದಗಳು ಹೆಚ್ಚು ಬೆವರುತ್ತದೆ. ಇದು ಈ ಪಾದದ ವಾಸನೆಗೆ ಕಾರಣವಾಗುತ್ತದೆ.
ಬೇಸಿಗೆಯಲ್ಲಿ, ತುಂಬಾ ಬಿಗಿಯಾಗಿಲ್ಲದ ಶೂಗಳು ಅಥವಾ ಪಾದರಕ್ಷೆಗಳನ್ನು ಖರೀದಿಸಿ. ತುಂಬಾ ಬಿಗಿಯಾದ ಶೂಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ಸಮಸ್ಯೆಗಳು, ಪಾದಗಳಲ್ಲಿ ನೋವು ಕಂಡು ಬರುತ್ತದೆ.
ದಿನವಿಡೀ ಗಾಳಿಯ ಪ್ರಸರಣವಿಲ್ಲದೇ ಪಾದಗಳನ್ನು ಶೂಗಳಲ್ಲಿ ಇರಿಸಿದರೆ ಬ್ಯಾಕ್ಟೀರಿಯಾದ ಸೋಂಕು ಮತ್ತು ಶಿಲೀಂಧ್ರಗಳು ಹೆಚ್ಚಾಗುವ ಸಾಧ್ಯತೆಯಿದೆ.
ಒಂದು ವೇಳೆ ಶೂ ಧರಿಸುವವರು ಕಾಲಕಾಲಕ್ಕೆ ಶೂಗಳನ್ನು ಸ್ವಚ್ಛಗೊಳಿಸುತ್ತ ಇರಿ. ಬೂಟುಗಳು ಮತ್ತು ಸಾಕ್ಸ್ಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅದು ನಿಮ್ಮ ಪಾದಗಳ ಚರ್ಮದ ಸೋಂಕಿಗೆ ಕಾರಣವಾಗಬಹುದು.