January22, 2026
Thursday, January 22, 2026
spot_img

Be Aware | ಸೈನಸ್, ಕಣ್ಣು ನೋವು ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಸಾಮಾನ್ಯವೆಂದು ನಿರ್ಲಕ್ಷಿಸಿದ ಸಣ್ಣ ತಲೆನೋವು ಮತ್ತು ಕಣ್ಣಿನ ಸುತ್ತಲಿನ ನೋವು, ಬೆಂಗಳೂರಿನ 32 ವರ್ಷದ ಯುವಕನಿಗೆ ಜೀವಕ್ಕೆ ಮತ್ತು ದೃಷ್ಟಿಗೆ ಅಪಾಯಕಾರಿಯಾಗಬಹುದಾದ ಮ್ಯೂಕರ್‌ಮೈಕೋಸಿಸ್‌ ಎಂಬ ಅಪರೂಪದ ಮತ್ತು ತೀವ್ರವಾದ ಫಂಗಲ್ ಸೋಂಕಿಗೆ ದಾರಿ ಮಾಡಿಕೊಟ್ಟ ಆಘಾತಕಾರಿ ಘಟನೆ ವರದಿಯಾಗಿದೆ. ಈ ರೀತಿಯ ಪ್ರಕರಣಗಳು ಕೋವಿಡ್‌ ಸಮಯದಲ್ಲಿ ಹೆಚ್ಚಾಗಿ ಕಂಡುಬಂದರೂ, ನಂತರವೂ ಇದರ ಬಗ್ಗೆ ಎಚ್ಚರಿಕೆ ಕಡಿಮೆಯಾಗಿರುವುದು ಆತಂಕಕಾರಿ ವಿಷಯ.

ತಲೆ ಮತ್ತು ಕಣ್ಣಿನ ಸುತ್ತಲಿನ ನೋವಿನಿಂದ ಬಳಲುತ್ತಿದ್ದ ರೋಗಿಯು ಮೊದಲು ಇದನ್ನು ಸಾಮಾನ್ಯ ನೋವು ಎಂದು ನಿರ್ಲಕ್ಷಿಸಿದ್ದರು. ಆದರೆ, ಇಂತಹ ಸಂದರ್ಭಗಳಲ್ಲಿ ತಲೆ, ಕಣ್ಣು ಅಥವಾ ಮೂಗಿನ ನೋವನ್ನು ನಿರ್ಲಕ್ಷಿಸಬಾರದು. ಅವು ಜೀವಕ್ಕೆ ಅಪಾಯ ತರುವ ಸಾಧ್ಯತೆ ಇರುತ್ತದೆ.

ಕೋವಿಡ್‌ ನಂತರ ಹಲವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದು, ಇಂತಹವರಲ್ಲಿ ಫಂಗಲ್ ಸೋಂಕುಗಳು ವೇಗವಾಗಿ ಹರಡುತ್ತವೆ. ತಲೆನೋವು ಅಥವಾ ಮೂಗಿನ ಸಮಸ್ಯೆಗಳನ್ನು, ವಿಶೇಷವಾಗಿ ಕೋವಿಡ್‌ ಗುಣಮುಖರಾದ ನಂತರದ ದಿನಗಳಲ್ಲಿ, ರೋಗಿಗಳು ಎಂದಿಗೂ ನಿರ್ಲಕ್ಷಿಸಬಾರದು. ಯಾವುದೇ ರೋಗಲಕ್ಷಣಗಳು ಕಂಡೊಡನೆ ಶೀಘ್ರವಾಗಿ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಅಗತ್ಯ.

Must Read