ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ದೀಪಾವಳಿ ಹಬ್ಬದಂದೇ ಸೂರ್ಯ ಗ್ರಹಣವೂ ಸಂಭವಿಸಲಿದ್ದು, ಈ ಖಗೋಳ ವಿಸ್ಮಯ ಕಣ್ಣುಗಳಿಗೆ ಅತ್ಯಂತ ಅಪಾಯಕಾರಿಯಾಗಿದ್ದು, ವೀಕ್ಷಣೆ ಮಾಡುವುದಾದರೂ ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ನರು ಎಚ್ಚರಿಸಿದ್ದಾರೆ.
ಎಚ್ಚರಿಕೆ ವಹಿಸಬೇಕಾದ ಕೆಲವು ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
1. ಗ್ರಹಣ ವೀಕ್ಷಣೆಗೆ ಸೌರ ವೀಕ್ಷಣೆ, ಗ್ರಹಣ ಕನ್ನಡಕ (ಎಕ್ಲಿಪ್ಸ್ ಗ್ಲಾಸ್), ದೂರದರ್ಶಕಗಳ ಬಳಕೆ ಮಾಡಿ
2. ಗ್ರಹಣ ಅವಧಿಯಲ್ಲಿ ಆಕಾಶದತ್ತ ಕಣ್ಣು ಹಾಯಿಸುವುದಾದರೆ ಕಣ್ಣಿನ ರಕ್ಷಣೆಗೆ ಅಗತ್ಯ ಸಾಧನ ಬಳಸಿ.
3. ಗ್ರಹಣ ವೀಕ್ಷಣೆಗೆ ಸನ್‌ಗ್ಲಾಸ್ ಬಳಕೆ ಎಂದೂ ಮಾಡಬೇಡಿ.
4. ಮೊಬೈಲ್ ಅಥವಾ ಕ್ಯಾಮರಾದಲ್ಲಿ ಗ್ರಹಣದ ಚಿತ್ರಗಳನ್ನು ತೆಗೆಯುವುದನ್ನು ತಪ್ಪಿಸಿ.
5. ಗ್ರಹಣ ವೀಕ್ಷಣೆ ಸ್ಥಳಗಳಿಂದ ಮಕ್ಕಳನ್ನು ದೂರವಿಡಿ, ಮಕ್ಕಳು ನೇರವಾಗಿ ಗ್ರಹಣ ವೀಕ್ಷಿಸದಂತೆ ಎಚ್ಚರಿಕೆ ವಹಿಸಿ.