Wednesday, December 24, 2025

ಮಕ್ಕಳನ್ನು ಶಾಲೆಗೆ ಸೇರಿಸೋ ಮುನ್ನ ಜಾಗ್ರತೆ! ಬೆಂಗಳೂರಿನಲ್ಲಿದೆ ಅನಧಿಕೃತ ಸ್ಕೂಲ್‌ಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಶಿಕ್ಷಣ ಸಂಸ್ಥೆಗಳು  ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದು, ಅನಧಿಕೃತವಾಗಿ ಬೋಧನೆ ನಡೆಸುತ್ತಿವೆ.

ಇಂತಹ ಶಾಲೆಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಡಿಡಿಪಿಐ ಮತ್ತು ಬಿಇಒಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.  ಹೆಣ್ಣೂರು ರಸ್ತೆಯ ಯುರೋಸ್ಕೂಲ್, ಕಿಡ್ಸ್ ಕ್ಯಾಸಲ್ ಪೂರ್ವ ಪ್ರಾಥಮಿಕ ಶಾಲೆ ಸಿಂಗಸಂದ್ರ, ಯರೋ ಸ್ಕೂಲ್ ತಿಪ್ಪಸಂದ್ರ ಗುಂಜೂರು, ಗರೇಭಾವಿಪಾಳ್ಯದ ಅಪೋಲೊ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ನರ್ಸರಿ ಶಾಲೆಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ.

error: Content is protected !!