July 27, 2026
Monday, July 27, 2026
spot_img

ಇರಾನ್‌ನ ಮುಂದಿನ ಸರ್ವಾಧಿಕಾರಿ ಯಾರೇ ಆಗಿರಲಿ ಕೊಲ್ಲುತ್ತೇವೆ: ಇಸ್ರೇಲ್‌ ಎಚ್ಚರಿಕೆ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನ ಮುಂದಿನ ಸರ್ವಾಧಿಕಾರಿಯಾಗಿ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಿದ್ದು, ಇದರ ಬೆನ್ನಲ್ಲೇ ಇಸ್ರೇಲ್‌, ಮುಂದಿನ ಸರ್ವಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ, ಅವರನ್ನು ನಿರ್ಮೂಲನೆಗೊಳಿಸುವುದೇ ತನ್ನ ಗುರಿಯಾಗಲಿದೆ ಎಂದು ಎಚ್ಚರಿಸಿದೆ.

ಅಮೆರಿಕ- ಇಸ್ರೇಲ್‌ ಮತ್ತು ಇರಾನ್‌ ನಡುವಣ ಯುದ್ಧದಿಂದ ಇದುವರೆಗೆ 787 ಮಂದಿ ಹತರಾಗಿದ್ದಾರೆ. ಲೆಬೆನಾನ್‌ನಲ್ಲಿ 60 ಜನ ಸಾವಿಗೀಡಾಗಿದ್ದಾರೆ. ಇಸ್ರೇಲ್‌ ನಲ್ಲಿ ಹನ್ನೆರಡು ಮಂದಿ ಹತರಾಗಿದ್ದಾರೆ. ಅಮೆರಿಕದ ಆರು ಸೈನಿಕರು ಸಾವಿಗೀಡಾಗಿದ್ದಾರೆ.

ಇದರ ನಡುವೆ ಇಸ್ರೇಲ್‌ ರಕ್ಷಣಾ ಸಚಿವ ಕಾಟ್ಜ್‌ ಅವರು, ಇಸ್ರೇಲಿನ ನಾಶಕ್ಕೆ ಪಣ ತೊಡುವ ಅಪಾಯ ಇದೆ. ಅಮೆರಿಕ ಮತ್ತು ಜಗತ್ತಿಗೆ ಅಪಾಯದ ಸಾಧ್ಯತೆ ಇದೆ. ಇರಾನಿನ ಜನರನ್ನು ನಿಗ್ರಹಿಸುವ ಸಲುವಾಗಿ ಇರಾನಿನ ಭಯೋತ್ಪಾದಕ ಆಡಳಿತದಿಂದ ನೇಮಿಸಲ್ಪಟ್ಟ ಯಾವುದೇ ನಾಯಕನನ್ನು ಹತ್ಯೆ ಮಾಡಲಾಗುತ್ತದೆ. ಆತ ಎಲ್ಲೇ ಅಡಗಿದ್ದರೂ ನಾವು ಬಿಡುವುದಿಲ್ಲ. ಆತ ಯಾರೇ ಆಗಿರಲಿ ಅದು ನಮಗೆ ಮುಖ್ಯವಲ್ಲ ಎಂದು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !