Wednesday, September 3, 2025

ಬಾಡಿಗೆಗೆ ಮನೆ ಕೊಡುವ ಮುನ್ನ ಎಚ್ಚರ : ಈ ಗೈಡ್‌ಲೈನ್ಸ್‌ ಫಾಲೋ ಮಾಡ್ಲೇಬೇಕು ಎಂದ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಕೇಳಿಕೊಂಡು ಬರುವ ಜನಕ್ಕೂ, ಬಾಡಿಗೆ ಮನೆಗಳಿಗೂ ಯಾವುದೇ ಕೊರತೆ ಇಲ್ಲ. ಬೆಂಗಳೂರಿಗೆ ಬೇರೆ ಊರುಗಳಿಂದ ಬಂದ ಎಷ್ಟೋ ಮಂದಿ ಬಾಡಿಗೆ ಮನೆಯಲ್ಲಿಯೇ ಇದ್ದಾರೆ.

ಇದೀಗ ಮನೆಗಳನ್ನು ಬಾಡಿಗೆ ಕೊಡುವ ಮುನ್ನ ಎಚ್ಚರವಾಗಿರಿ, ಈ ಎಲ್ಲ ಗೈಡ್‌ಲೈನ್‌ಗಳನ್ನು ಫಾಲೋ ಮಾಡಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ಕೊಡುವುದು ಸಿಕ್ಕಾಪಟ್ಟೆ ಡೇಂಜರ್ ಎನ್ನಲಾಗ್ತಿದೆ. ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರ್ತಾರೆ. ಇಂಥವರನ್ನ ಗುರುತಿಸೋದು ಕಷ್ಟವಾಗಿದೆ. ಹೀಗಾಗಿ ಸಿಲಿಕಾನ್ ಸಿಟಿ ಮನೆ ಮಾಲೀಕರಿಗೆ ಪೊಲೀಸರು ಗೈಡ್ ಲೈನ್ಸ್ ನೀಡಿದ್ದಾರೆ.

ವಿದೇಶಿ ಪ್ರಜೆಗಳು ವಾಸವಿರುವ ಮನೆ ಮಾಲೀಕರಿಗಾಗಿ ಮಾರ್ಗಸೂಚಿ ಹೊರಡಿಸಿದ್ದಾರೆ. ಅದರಲ್ಲೂ ಐಟಿ ಬಿಟಿ ಹಬ್ ವೈಟ್ ಫೀಲ್ಡ್ ಏರಿಯಾಗಳಲ್ಲಿ ಹೆಚ್ಚಾಗಿ ವಿದೇಶಿಗರು ನೆಲೆಸಿದ್ದಾರೆ. ಹೀಗಾಗಿ ಇಲ್ಲಿನ ಮನೆ ಮಾಲೀಕರಿಗೆ ವಿಶೇಷವಾಗಿ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಮನೆ ಮಾಲೀಕರು ಸಿ ಫಾರ್ಮ್ ಅನ್ನ ಎಫ್ಆರ್ ಆರ್ ಓ/ ಎಫ್ಆರ್ ಓಗೆ ಸಲ್ಲಿಸಬೇಕು. ಬಾಡಿಗೆದಾರರ ಪಾಸ್ ಪೋರ್ಟ್ ಮತ್ತು ವೀಸಾ ಪ್ರತಿಗಳು ಕಡ್ಡಾಯವಾಗಿ ಸಂಗ್ರಹಿಸಬೇಕು. ಬಾಡಿಗೆ ನೀಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮಾನ್ಯ ವೀಸಾ/ಅನುಮತಿ ಇಲ್ಲದೆ ವಾಸಿಸಲು ಅವಕಾಶ ನೀಡಬಾರದು.

ಇದನ್ನೂ ಓದಿ