March 12, 2026
Thursday, March 12, 2026
spot_img

ಬೆಳಗಾವಿಯಲ್ಲಿ ತಡರಾತ್ರಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಅಪಮಾನ: ಬಿಗುವಿನ ವಾತಾವರಣ

ಹೊಸದಿಗಂತ ವರದಿ ಬೆಳಗಾವಿ:

ಯಾರೋ ಕಿಡಗೇಡಿಗಳು ತಡರಾತ್ರಿ ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ‌ ಯಾವುದೋ ಪದಾರ್ಥವನ್ನು ಹಚ್ಚಿ ಅಪಮಾನ‌ ಮಾಡಿರುವ ಕುರಿತು ದೂರು ಬಂದಿದೆ. ಘಟನಾ ಸ್ಥಳಕ್ಕೆ‌ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.‌

ಪ್ರತಿಮೆಯ ಮೇಲಿದ್ದ ಪದಾರ್ಥದ ಮಾದರಿಯನ್ನು ಸಂಗ್ರಹಿಸಿ ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳದ ಸಮೀಪದಲ್ಲೇ ಸಿಸಿಟಿವಿ ಕ್ಯಾಮರಾ ಇರುವುದರಿಂದ ಅದರ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ‌ ನಡೆಸುತ್ತಿದ್ದಾರೆ. ‌

ಈ‌ ಕೃತ್ಯದ ಬಗ್ಗೆ ದೂರುದಾರರನ್ನು ವಿಚಾರಣೆಗೊಳಪಡಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !