ಹೊಸದಿಗಂತ ವರದಿ,ಅಂಕೋಲಾ:
ಸಾಮಾಜಿಕ ಜಾಲ ತಾಣಗಳಲ್ಲಿ ಇತ್ತೀಚೆಗೆ ಎ.ಐ ಸಂಬಂಧಿಸಿದ ಚಟುವಟಿಕೆಗಳು ಹೆಚ್ಚತೊಡಗಿದು ಫೋಟೋಗಳನ್ನು ಕಾರ್ಟೂನ್ ರೀತಿಯಲ್ಲಿ ಪರಿವರ್ತಿಸುವ ಘಿಬ್ಲಿ ಎಲ್ಲಡೆ ಟ್ರೆಂಡ್ ಆಗತೊಡಗಿದೆ.
ಈ ನಡುವೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ಘಟಕದ ವತಿಯಿಂದ ಪ್ರಕಟನೆಯೊಂದನ್ನು ಹೊರಡಿಸಲಾಗಿದ್ದು ಎ.ಐ ಅಪ್ಲಿಕೇಶನ್ ಗಳಿಗೆ ಪೋಟೋಗಳು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಹಂಚಿಕೊಳ್ಳುವ ಮೊದಲು ಎ.ಐ ಅಪ್ಲಿಕೇಶನ್ ವಿಶ್ವಾಸಾರ್ಹವೇ ಎನ್ನುವ ಕುರಿತು ಅರಿತುಕೊಳ್ಳುವಂತೆ ತಿಳಿಸಲಾಗಿದೆ.
ಫೋಟೋಗಳನ್ನು ಅಪ್ಲೋಡ್ ಮಾಡುವ ಪೂರ್ವದಲ್ಲಿ ಅಪ್ಲಿಕೇಶನ್ ನಿಯಮಗಳನ್ನು ಸಂಪೂರ್ಣವಾಗಿ ಓದಿ ತಿಳಿದು ಮುಂದುವರಿಯಲು ಸೂಚಿಸಲಾಗಿದ್ದು ಸ್ಪಷ್ಟ ನಿಯಮಗಳನ್ನು ತಿಳಿಸಿರುವಂತ ವಿಶ್ವಾಸಾರ್ಹ ಅಪ್ಲಿಕೇಶನ್ ಗಳನ್ನು ಬಳಸುವಂತೆ ತಿಳಿಸಲಾಗಿದೆ.
ಕೆಲವೊಂದು ಸಂದರ್ಭಗಳಲ್ಲಿ ಎ.ಐ ಮೂಲಕ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಇರುವುದರಿಂದ ಪೋಟೋಗಳನ್ನು ಕಳಿಸುವ ಪೂರ್ವದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿ ಖಾಸಗಿ ಅಥವಾ ಸೂಕ್ಷ್ಮ ಸಂಗತಿಗಳನ್ನು ಒಳಗೊಂಡ ಪೋಟೋಗಳನ್ನು ಅಪ್ಲೋಡ್ ಮಾಡಬಾರದು ಎಂದು ತಿಳಿಸಲಾಗಿದೆ.
ವಿಶ್ವಾಸಾರ್ಹ ಎ.ಐ ಅಪ್ಲಿಕೇಶನ್ ಮಾತ್ರ ಬಳಸುವಂತೆ ಗೌಪ್ಯತೆಯ ಕುರಿತಂತೆ ಎಚ್ಚರದಿಂದ ಇರುವಂತೆ ಸೈಬರ್ ಕ್ರೈಂ ವತಿಯಿಂದ ಎಚ್ಚರಿಕೆ ನೀಡಲಾಗಿದೆ.