ಭಾರತೀಯ ಉಪಖಂಡದಲ್ಲಿ ನಾನ್-ವೆಜ್ ಆಹಾರದ ಅಗ್ರಪಂಕ್ತಿಯಲ್ಲಿ ಪ್ರಾನ್ ಅಡಿಗೆಗಳಿಗೆ ವಿಶೇಷ ಸ್ಥಾನವಿದೆ. ಈ ಮೀನಿನ ವರ್ಗದ ಆಹಾರ ಪದಾರ್ಥವು ಮಾಂಸಾಹಾರ ಪ್ರಿಯರಿಗೂ ಆಕರ್ಷಕವಾಗಿದ್ದು, ರುಚಿಗೆ ತಕ್ಕಂತೆ ಹಲವಾರು ರೀತಿಯ ಖಾದ್ಯಗಳಲ್ಲಿ ಬಳಕೆಯಾಗುತ್ತದೆ. ವಿಶೇಷವಾಗಿ ಪ್ರಾನ್ ಮಸಾಲಾ, ಪ್ರಾನ್ ಫ್ರೈ, ಪ್ರಾನ್ ಕರಿ ಮುಂತಾದವು.
ಆದರೆ ರುಚಿಕರ ಪ್ರಾನ್ ತಯಾರಿಸಲು ಮುನ್ನ ಅದರ ಶುದ್ಧತೆಯ ಬಗ್ಗೆ ಎಚ್ಚರಿಕೆ ಅಗತ್ಯ. ಸರಿಯಾಗಿ ಶುದ್ಧೀಕರಿಸದ ಪ್ರಾನ್ ಆರೋಗ್ಯಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂಬುದು ಆರೋಗ್ಯ ತಜ್ಞರ ಎಚ್ಚರಿಕೆ.
ಶುದ್ಧೀಕರಣದ ಪ್ರಮುಖ ಅಂಶಗಳು:
ತಲೆಯ ಭಾಗವನ್ನು ತೆಗೆಯಿರಿ: ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಪ್ರಾನ್ಸ್ ತಲೆಯೊಂದಿಗೆ ಬರುತ್ತವೆ. ಈ ತಲೆ ಭಾಗವು ಕೆಲವೊಮ್ಮೆ ವಿಷಕಾರಿಯಾಗುವ ಸಾಧ್ಯತೆ ಇರುವುದರಿಂದ, ಇದನ್ನು ತೆಗೆದುಹಾಕಬೇಕು.
ನರ ತೆಗೆಯಿರಿ: ಪ್ರಾನ್ಸ್ ಮೇಲ್ಬಾಗದಲ್ಲಿರುವ ಸಣ್ಣ ಗಾತ್ರದ ನರ ಒಂದನ್ನು ತೆಗೆಯಬೇಕು. ಪ್ರಾನ್ ಮೇಲ್ಬಾಗದಲ್ಲಿ ಸಣ್ಣ ನೂಲಿನಂತೆ ಇರುವ ಈ ನರವನ್ನು ತೆಗೆಯಬೇಕು. ತಲೆ ಹಾಗೂ ನರ ಎರಡು ವಿಷಕಾರಿಯಾಗಬಲ್ಲದು. ಹೀಗಾಗಿ ಇವರೆಡರ ಬಗ್ಗೆ ಅತೀವ ಗಮನವಹಿಸಬೇಕು.
ಪರಿಶೀಲನೆ ಅಗತ್ಯ: ಕೆಲವೊಮ್ಮೆ ಮಾರುಕಟ್ಟೆಯಲ್ಲಿ “ಶುದ್ಧೀಕರಿಸಲಾಗಿದೆ” ಎಂಬ ಲೇಬಲ್ ಇದ್ದರೂ ಕೂಡ, ಮತ್ತೆ ನೋಡಿ ಪರಿಶೀಲಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತ.
ಪ್ರಾನ್ ಖಾದ್ಯಗಳ ಆರೋಗ್ಯ ಪ್ರಯೋಜನಗಳು:
100 ಗ್ರಾಂ ಪ್ರಾನ್ಸ್ ಖಾದ್ಯದಲ್ಲಿ ಕೇವಲ 115 ಕ್ಯಾಲೊರಿಗಳು ಇರುತ್ತವೆ, ಇದು ತೂಕದ ನಿಯಂತ್ರಣಕ್ಕೆ ಸಹಾಯಕ.
ಪ್ರಾನ್ಸ್‌ನಲ್ಲಿ ವಿಟಮಿನ್ B12, ಜಿಂಕ್, ಕಬ್ಬಿಣ, ಕ್ಯಾಲ್ಸಿಯಂ, ಮಿನರಲ್‌ಗಳು ಇರುತ್ತವೆ, ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉಪಯುಕ್ತ.
ಪ್ರಾನ್‌ಗಳಲ್ಲಿ ಇರುವ ಆಯೋಡಿನ್ ಮತ್ತು ಇತರ ಮಿನರಲ್‌ಗಳು ಥೈರಾಯ್ಡ್ ಕಾರ್ಯಚಟುವಟಿಕೆಗೆ ಸಹಾಯಕವಾಗಬಹುದು.
ಶೇಕಡಾ 15ರಷ್ಟು ಕಬ್ಬಿಣಾಂಶ ಹೊಂದಿರುವ ಪ್ರಾನ್, ಅನಿಮಿಯಾ ಅಥವಾ ರಕ್ತಹೀನತೆಯ ತೊಂದರೆಯವರಿಗೂ ಉತ್ತಮ ಆಹಾರವಾಗುತ್ತದೆ.
ಪ್ರಾನ್ ಖಾದ್ಯಗಳು ನಿಜಕ್ಕೂ ರುಚಿಕರವಾಗಿದ್ದು, ಪೌಷ್ಟಿಕ ಅಂಶಗಳಿಂದ ಕೂಡಿವೆ. ಆದರೆ ಸಜ್ಜುಗೊಳಿಸುವಾಗ ಎಚ್ಚರಿಕೆ ಅತ್ಯಗತ್ಯ. ನುರಿತರ ಮಾರ್ಗದರ್ಶನದಲ್ಲಿ ಅಥವಾ ಸರಿಯಾದ ವಿಧಾನದಲ್ಲಿ ತಯಾರಿಸಿದರೆ, ಇದು ಆರೋಗ್ಯಕ್ಕೂ ರುಚಿಗೂ ಉತ್ತಮ.