March 9, 2026
Monday, March 9, 2026
spot_img

ಕಲ್ಲಂಗಡಿ ಖರೀದಿಸುವಾಗ ಹುಷಾರ್! ನ್ಯಾಚುರಲ್ ಅಥವಾ ಇಂಜೆಕ್ಷನ್ ಕೊಟ್ಟಿದ್ದಾರಾ ಅಂತ ನೋಡ್ಕೊಳಿ

ಬೇಸಿಗೆ ಹೆಚ್ಚಾಗುತ್ತಿದ್ದಂತೆ ಜನರು ದೇಹವನ್ನು ತಂಪಾಗಿಸಿಕೊಳ್ಳಲು ಕಲ್ಲಂಗಡಿ ಹಣ್ಣನ್ನು ಹೆಚ್ಚು ತಿನ್ನುತ್ತಾರೆ. ಹೆಚ್ಚಿನ ನೀರಿನ ಅಂಶ ಹೊಂದಿರುವ ಈ ಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಂ, ವಿಟಮಿನ್ A ಮತ್ತು C ಸಮೃದ್ಧವಾಗಿವೆ. ಆದ್ದರಿಂದ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಕಲ್ಲಂಗಡಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಲಬೆರಕೆ ಕಲ್ಲಂಗಡಿಗಳ ಹಾವಳಿ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

ಕೆಲವರು ವ್ಯಾಪಾರಿಗಳು ಹಣ್ಣು ಬೇಗನೆ ಹಣ್ಣಾಗಲು ಮತ್ತು ಒಳಭಾಗ ಹೆಚ್ಚು ಕೆಂಪಾಗಿ ಕಾಣಲು ರಾಸಾಯನಿಕ ಇಂಜೆಕ್ಷನ್ ಬಳಸುತ್ತಿರುವ ಸುದ್ದಿ ಎಲ್ಲರಿಗು ಗೊತ್ತೇ ಇದೆ. ಇಂತಹ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಇದನ್ನೂ ಓದಿ:

ಕಲ್ಲಂಗಡಿ ನೈಸರ್ಗಿಕವೇ ಅಥವಾ ಕಲಬೆರಕೆಯೇ ಎಂದು ತಿಳಿಯಲು ಸರಳ ಪರೀಕ್ಷೆ ಮಾಡಬಹುದು. ಹಣ್ಣು ಕತ್ತರಿಸಿದ ನಂತರ ಅದರ ಒಳಭಾಗವನ್ನು ಟಿಶ್ಯೂ ಪೇಪರ್ ಅಥವಾ ಹತ್ತಿಯಿಂದ ಸ್ವಲ್ಪ ಉಜ್ಜಿ ನೋಡಬೇಕು. ಟಿಶ್ಯೂಗೆ ಕೆಂಪು ಬಣ್ಣ ಹತ್ತಿದರೆ, ಅದರಲ್ಲಿ ರಾಸಾಯನಿಕ ಬಳಕೆಯಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ “ಎರಿಥ್ರೋಸಿನ್” ಎಂಬ ಬಣ್ಣದ ರಾಸಾಯನಿಕವನ್ನು ಬಳಸಲಾಗುತ್ತದೆ.

ಇದರ ಜೊತೆಗೆ ಕೆಲವು ವ್ಯಾಪಾರಿಗಳು ಕಲ್ಲಂಗಡಿಯನ್ನು ಬೇಗ ಹಣ್ಣಾಗಿಸಲು ಕಾರ್ಬೈಡ್ ಬಳಸುತ್ತಾರೆ. ಅಂಥ ಹಣ್ಣುಗಳ ಮೇಲೆ ಹಳದಿ ಕಲೆಗಳು ಕಾಣಿಸಬಹುದು. ಹಣ್ಣು ಖರೀದಿಸುವ ಮೊದಲು ಮೇಲ್ಭಾಗದಲ್ಲಿ ಸಣ್ಣ ರಂಧ್ರಗಳಿರುವುದನ್ನು ಗಮನಿಸಬೇಕು. ಇವು ಇಂಜೆಕ್ಷನ್ ಗುರುತುಗಳಾಗಿರಬಹುದಾದ್ದರಿಂದ, ಅಂತಹ ಕಲ್ಲಂಗಡಿಗಳನ್ನು ಖರೀದಿಸುವುದನ್ನು ತಪ್ಪಿಸುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !