Friday, January 23, 2026
Friday, January 23, 2026
spot_img

Be Strong | ಅಯ್ಯೋ ಈ ಕಷ್ಟ ನನಗೇ ಯಾಕೆ ಬಂತಪ್ಪಾ.. ದೇವ್ರೇ! ಅಂತ ಕೊರಗಬೇಡಿ

ಒಂಟಿತನ, ನಿರಾಶೆ, ನಂಬಿಕೆ ಮುರಿದ ಕ್ಷಣಗಳು ಇವು ಎಲ್ಲರ ಬದುಕಲ್ಲೂ ಒಮ್ಮೆ ಬಂದೇ ಬರುತ್ತವೆ. “ಇನ್ನೇನು ಸಾಕು, ಇಷ್ಟೇ ಜೀವನ” ಅನ್ನಿಸುವ ಹೊತ್ತು ಮನಸ್ಸು ಸಂಪೂರ್ಣವಾಗಿ ಕುಗ್ಗಿರುತ್ತದೆ. ಸಮಸ್ಯೆಗಳು ಬೆಟ್ಟದಂತೆ ಕಾಣುತ್ತವೆ, ನೋವು ಉಸಿರಾಡಲು ಕೂಡ ಬಿಡೋದಿಲ್ಲ. ಆದರೆ ನೆನಪಿರಲಿ, ಬದುಕು ಕೇವಲ ಕತ್ತಲೆಯ ಕೋಣೆಯಲ್ಲ. ಅದಕ್ಕೆ ಒಂದು ಬೆಳಕಿರುವ ಬಾಗಿಲು ಇದೆ ಅನ್ನೋದು ಮರಿಬೇಡಿ. ಆ ದಾರಿಯನ್ನು ಕಾಣಿಸಿಕೊಡುವುದೇ ಈ ಸಣ್ಣ ಆದರೆ ಶಕ್ತಿಯುತ ಚಿಂತನೆಗಳು.

ಇಂದು ಕಾಡುವ ನೋವು ನಾಳೆ ಇರುತ್ತದೆ ಎಂಬ ಗ್ಯಾರಂಟಿ ಇಲ್ಲ. ಸಮಯ ಎಲ್ಲವನ್ನೂ ಬದಲಿಸುತ್ತದೆ.

ಒಮ್ಮೆ ನಿಮ್ಮ ಗೆಲುವುಗಳನ್ನು ನೆನಪಿಸಿಕೊಳ್ಳಿ. ನೀವು ಹಿಂದೆ ಎಷ್ಟೋ ಕಷ್ಟಗಳನ್ನು ದಾಟಿದ್ದೀರಿ. ಇದು ಕೂಡ ಅದರಲ್ಲಿ ಒಂದೇ.

ಪ್ರೇರಣೆ ನೀಡುವ ವಿಚಾರಗಳತ್ತ ಮನಸ್ಸು ಬದಲಿಸಿ. ನೋವಿನ ಮಾತುಗಳಲ್ಲಿ ಮುಳುಗಬೇಡಿ. ಧೈರ್ಯ ಕೊಡುವ ಮಾತುಗಳನ್ನು ಹುಡುಕಿ.

ದೊಡ್ಡ ಸಮಸ್ಯೆಗೆ ಸಣ್ಣ ಗುರಿಗಳು ಪರಿಹಾರ ಅನ್ನೋದು ನೆನಪಿರಲಿ. ಪ್ರತಿ ದಿನ ಒಂದೊಂದು ಸಣ್ಣ ಹೆಜ್ಜೆ ಸಾಕು.

ಒಬ್ಬರ ಮಾತು ಕೂಡ ಔಷಧಿಯಾಗಬಹುದು. ನಂಬಿಕಸ್ಥರರೊಂದಿಗೆ ನಿಮ್ಮ ನೋವನ್ನು ಹಂಚಿಕೊಳ್ಳಿ.

ಬದಲಾವಣೆಯನ್ನು ಒಪ್ಪಿಕೊಳ್ಳಿ. ನಿರಾಕರಣೆ ನೋವನ್ನು ಹೆಚ್ಚಿಸುತ್ತದೆ, ಒಪ್ಪಿಕೊಳ್ಳುವಿಕೆ ಶಕ್ತಿಯನ್ನು ಕೊಡುತ್ತದೆ.

ಎಲ್ಲರೂ, ಎಲ್ಲವೂ ನಿಮ್ಮ ವಿರುದ್ಧವಲ್ಲ. ಆಗುತ್ತಿರುವುದರ ಮೇಲೆ ಸ್ವಲ್ಪ ವಿಶ್ವಾಸ ಇರಲಿ

ನೋವು ಕೂಡ ನಿಮ್ಮನ್ನ ಬಲಿಷ್ಠನಾಗಿಸುತ್ತದೆ. ಅನುಭವವನ್ನು ಪಾಠವನ್ನಾಗಿ ಮಾಡಿಕೊಳ್ಳಿ

ಪ್ರತಿ ಜೀವನಕ್ಕೂ ತನ್ನದೇ ಸಮಯರೇಖೆ ಇದೆ. ಇನ್ನೊಬ್ಬರ ಜೊತೆ ಹೋಲಿಕೆ ಮಾಡೋಕೆ ಹೋಗ್ಬೇಡಿ

ಹೊಸತನಕ್ಕೆ ಅವಕಾಶ ಕೊಡಿ. ಹೊಸ ಕೆಲಸ, ಹೊಸ ಪರಿಸರ ಮನಸ್ಸನ್ನು ಹಗುರಾಗಿಸುತ್ತದೆ.

Must Read