ಹೊಸದಿಗಂತ ವರದಿ ಮುಂಡಗೋಡ:
ತಾಲೂಕಿನ ಪಾಳಾ ಅರಣ್ಯದಲ್ಲಿ ರವಿವಾರ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿದ್ದು ಅದೃಷ್ಟವಶಾತ್ ಕರಡಿ ಹಿಂಡಿನಿಂದ ಪಾರಾದ ಘಟನೆ ನಡೆದಿದೆ.
ಪಾಳಾ ಗ್ರಾಮದ ಚಿಕ್ಕಪ್ಪ ನಿಂಗಪ್ಪ ಮಾವುರ ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಪಾಳಾ ಸರ್ವೆ 71 ರ ಅರಣ್ಯದಲ್ಲಿ ದನ ಮೇಯಿಸಲು ಹೋದಾಗ ಎರಡು ಮರಿ ಜೊತೆ ದೊಡ್ಡ ಕರಡಿ ಪ್ರತ್ಯಕ್ಷವಾಗಿ ಏಕಾಏಕಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದೆ. ಗಾಬರಿಗೊಂಡು ಚಿಕ್ಕಪ್ಪ ಕೂಗಾಡಿದಾಗ ಅಲ್ಲೇ ಪಕ್ಕದಲ್ಲಿ ದನ ಮೇಯಿಸುತ್ತಿದ್ದ ಸುರೇಶ ಎಂಬುವರು ಚಿಕ್ಕಪ್ಪನ ಧ್ವನಿ ಕೇಳಿ ಸ್ಥಳಕ್ಕೆ ಬಂದಾಗ ಕರಡಿ ದಾಳಿ ಮಾಡುತ್ತಿರುವುದು ನೋಡಿ ಕಟ್ಟಿಗೆಯ ಡೊಣ್ಣೆಯಿಂದ ಅವುಗಳನ್ನು ಓಡಿಸಿದ್ದಾನೆ. ಇದರಿಂದ ಚಿಕ್ಕಪ್ಪನಿಗೆ ಕೈ ಮತ್ತು ಎದೆಯ ಮೇಲೆ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರತಿದಿನದಂತೆ ನಮ್ಮ ಗದ್ದೆ ಹತ್ತಿರ ಸರ್ವೆ ನಂಬರ 71 ರಲ್ಲಿ ದನಗಳನ್ನು ಮೇಯಿಸಲು ಹೋಗಿದ್ದೆ ಆ ವೇಳೆ ತಾಯಿ ಮತ್ತು ಎರಡು ಮರಿ ಜೊತೆ ಕರಡಿ ಬಂದು ನನ್ನ ಮೇಲೆ ದಾಳಿ ಮಾಡಿ ಎದೆಯ ಮೇಲೆ ಕೈಯ ಮೇಲೆ ಉಗೀರಿನಿಂದ ಚುಬೀರಿತು. ಹೆದರಿ ಚಿರಾಡಿ ತೊಡಗಿದೆ. ಅಲ್ಲಿ ಪಕ್ಕದಲ್ಲಿ ದನ ಮೇಯಿಸುತ್ತಿದ್ದ ಸುರೇಶ ಎಂಬಾತನು ನನ್ನ ಧ್ವನಿ ಕೇಳಿ ಓಡಿ ಬಂದನು. ಬಡಿಗೆಯಿಂದ ಅದಕ್ಕೆ ಹೊಡೆದಾಗ ಅವು ಓಡಿ ಹೋದವು ಸುರೇಶ್ ಬರೆದಿದ್ದರೆ ನನ್ನ ಜೀವವನ್ನೇ ತೆಗೆಯುತ್ತಿತ್ತು. ದೇವರ ರೂಪದಲ್ಲಿ ಬಂದು ಸುರೇಶ್ ನನ್ನನ್ನು ಬದುಕಿಸಿದನು ಎಂದು ಕರಡಿ ದಾಳಿಯಿಂದ ಗಾಯಗೊಂಡ ಚಿಕ್ಕಪ್ಪ ಮಾವುರ ತನ್ನ ಕಹಿ ಘಟನೆಯನ್ನು ವಿವರಿಸಿದನು.