ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಕಾಕುಳಂ ಜಿಲ್ಲೆಯ ಮಂದಸ ಮಂಡಲದಲ್ಲಿ ಕರಡಿಯೊಂದು ಆಂಬ್ಯುಲೆನ್ಸ್‌ಗೆ ಅಡ್ಡಗಟ್ಟಿದ ಘಟನೆ ನಡೆದಿದೆ. ರಟ್ಟಿ ಗ್ರಾಮದಲ್ಲಿ ಮುಂಜಾನೆ ರೋಗಿಯೊಬ್ಬರನ್ನು ಕರೆತರಲು ಹೋದ ಆಂಬ್ಯುಲೆನ್ಸ್ ಅನ್ನು ದಾರಿಯಲ್ಲಿ ಕರಡಿ ಅಡ್ಡಗಟ್ಟಿದೆ. ಆಂಬ್ಯುಲೆನ್ಸ್ ದಾರಿ ಕೊಡದೆ ಕೆಲಕಾಲ ಆಟ ಆಡಿಸಿದೆ.
ಸ್ವಲ್ಪ ಸಮಯದ ನಂತರ ಕರಡಿ ಪಕ್ಕದ ಹೊಲಗಳಿಗೆ ಓಡುತ್ತಿದ್ದಂತೆ ಆಂಬ್ಯುಲೆನ್ಸ್ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಇಲ್ಲಿ ರಾತ್ರಿ ಮತ್ತು ಮುಂಜಾನೆ ರಸ್ತೆಗಳಲ್ಲಿ ಕರಡಿಗಳು ಓಡಾಡುತ್ತಿವೆ ಎನ್ನುತ್ತಾರೆ ಸ್ಥಳೀಯರು. ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕರಡಿಗಳಿಂದ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.