ಇಂದಿನ ಯುಗದಲ್ಲಿ ಎಲ್ಲರೂ ಆರೋಗ್ಯಪೂರ್ಣ, ಹೊಳೆಯುವ ಚರ್ಮಕ್ಕಾಗಿ ಅಸೆಪಡುತ್ತಾರೆ. ವಿಶೇಷವಾಗಿ ಕೊರಿಯನ್ ಸ್ಕಿನ್ ಕೇರ್ ರಹಸ್ಯಗಳು ಇತ್ತೀಚೆಗೆ ತುಂಬಾ ಜನಪ್ರಿಯವಾಗಿವೆ. ಅವರು ಬಳಸುವ ವರ್ಧಕಗಳು ನೈಸರ್ಗಿಕವಾಗಿ ಚರ್ಮವನ್ನು ಕಂಗೊಳಿಸುವಂತೆ ಮಾಡುತ್ತವೆ, ಅಲ್ಲದೆ ಚರ್ಮದ ಆರೋಗ್ಯವನ್ನು ದೀರ್ಘಕಾಲದವರೆಗೆ ಕಾಯ್ದಿಡುತ್ತವೆ.
ಡಬಲ್ ಕ್ಲೆನ್ಜಿಂಗ್ (Double Cleansing):
ಮೊದಲು ತೈಲ ಆಧಾರಿತ ಕ್ಲೆನ್ಜರ್ ಬಳಸಿ, ನಂತರ ವಾಟರ್ ಬೇಸ್ ಕ್ಲೆನ್ಜರ್ ಉಪಯೋಗಿಸಿ. ಇದು ಮೇಕಪ್, ಧೂಳು ಹಾಗೂ ಬೆವರುವನ್ನು ಸಂಪೂರ್ಣವಾಗಿ ತೆಗೆಯಲು ಸಹಾಯ ಮಾಡುತ್ತದೆ. ಚರ್ಮದ ಕಳೆಗುಂದುವಿಕೆಯನ್ನು ತಡೆಯುತ್ತದೆ.
ಟೋನರ್ ಬಳಸಿ ಚರ್ಮ ಹೈಡ್ರೇಟ್ ಮಾಡಿ:
ಟೋನರ್ ಬಳಸುವುದು ಕೊರಿಯನ್ ಸ್ಕಿನ್ ಕೇರ್‌ನ ಮುಖ್ಯ ಅಂಶ. ಇದು ಚರ್ಮದ pH ಮಟ್ಟವನ್ನು ಸಮತೋಲನದಲ್ಲಿ ಇಡುತ್ತದೆ. ನಿಮ್ಮ ಮುಖದ ಚರ್ಮವನ್ನು ಸೀರಮ್ ಅಥವಾ ಮಾಯಿಶ್ಚರೈಜರ್ ಹೀರಿಕೊಳ್ಳಲು ಸಿದ್ಧಗೊಳಿಸುತ್ತದೆ.
ಶೀಟ್ ಮಾಸ್ಕ್ (Sheet Masks):
ಶೀಟ್ ಮಾಸ್ಕ್ ಗಳು ಚರ್ಮಕ್ಕೆ ತಕ್ಷಣದ ತಾಜಾತನ ನೀಡುತ್ತವೆ. ಈ ಮಾಸ್ಕ್‌ಗಳಲ್ಲಿ ಸೀರಮ್‌ನಂತಹ ಅಂಶಗಳು ಇರುತ್ತವೆ, ಇವು ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ.
ಸನ್‌ಸ್ಕ್ರೀನ್ ನಿತ್ಯ ಬಳಸಿ:
ಯಾವುದೇ ಋತು ಆಗಿರಲಿ, ಸನ್‌ಸ್ಕ್ರೀನ್ ಅನ್ನು ಪ್ರತಿದಿನವೂ ಬಳಸುವುದು ಅತ್ಯವಶ್ಯಕ. ಡಾರ್ಕ್ ಸರ್ಕಲ್, ಕಪ್ಪು ಕಲೆಗಳು, ಮತ್ತು ಮುಖ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ.
ಒಳಗಿನಿಂದ ಆರೈಕೆ – ನೀರಿನ ಸೇವನೆ ಮತ್ತು ಆರೋಗ್ಯಕರ ಆಹಾರ:
ನೀವು ಹೊರಗಿನಿಂದ ಚರ್ಮದ ಪೋಷಣೆಯನ್ನು ಮಾಡಿದರೂ, ಒಳಗಿನಿಂದ ಆರೋಗ್ಯವಿಲ್ಲದಿದ್ದರೆ ಅದು ಪರಿಣಾಮಕಾರಿಯಾಗದು. ದಿನಕ್ಕೆ ಕನಿಷ್ಟ 2-3 ಲೀಟರ್ ನೀರು ಕುಡಿಯಿ ಮತ್ತು ಹಣ್ಣು, ತರಕಾರಿ ಸೇರಿದಂತೆ ಪೋಷಕಾಂಶಗಳಿರುವ ಆಹಾರ ಸೇವಿಸಿ.