ಕೊರಿಯನ್ ಗ್ಲಾಸ್ ಸ್ಕಿನ್ ಈಗ ಯುವಜನರಲ್ಲಿ ಸಧ್ಯದಲ್ಲಿ ಟ್ರೆಂಡ್ ನಲ್ಲಿದೆ. ಬಿಳಿಯ ತ್ವಚೆ, ಮೃದುವಾದ ಚರ್ಮ, ಕನ್ನಡಿಯಂತೆ ಹೊಳೆಯುವ ಮೆತ್ತಗಿನ ಸೌಂದರ್ಯವನ್ನು ಒಂದು ಸರಿಯಾದ ಸ್ಕಿನ್ ಕೇರ್ ರೂಟೀನ್ ಮೂಲಕ ನೀವು ಪಡೆದುಕೊಳ್ಳಬಹುದು.
ನಿಮಗೂ ಈ ಕೊರಿಯನ್ ಗ್ಲಾಸ್ ಸ್ಕಿನ್ ಬೇಕಾ ಹಾಗಾದ್ರೆ ಈ ಸ್ಕಿನ್ ಕೇರ್ ರೂಟೀನ್ ಫಾಲೋ ಮಾಡಿ.
ಡಬಲ್ ಕ್ಲೆನ್ಸಿಂಗ್ – ಮುಖದ ಮೇಲೆ ಮಾಡಿರುವ ಮೆಕಪ್ ಜೊತೆಗೆ ಮತ್ತು ಮಲಿನತೆ ನಿವಾರಿಸಲು ಮೊದಲು ಆಯಿಲ್ ಬೇಸ್ಡ್ ಕ್ಲೆನ್ಸರ್ ಬಳಸಿ, ನಂತರ ಫೋಮ್ ಕ್ಲೆನ್ಸರ್ ಬಳಸಿ.
ಎಕ್ಸ್ಫೋಲಿಯೇಷನ್ – ಡೆಡ್ ಸ್ಕಿನ್ ಗಳನ್ನು ತೆಗೆಯಲು ವಾರಕ್ಕೆ 2-3 ಬಾರಿ ಸೌಮ್ಯವಾದ ಎಕ್ಸ್ಫೋಲಿಯೇಟರ್ ಬಳಸಿ.
ಟೋನರ್ – ತ್ವಚೆಯ ತೇವಾಂಶ ಕಾಪಾಡಿಕೊಳ್ಳಲು ಹೈಡ್ರೇಟಿಂಗ್ ಟೋನರ್ ಬಳಸಿ.
ಸೀರಮ್ – ಮುಖದ ಚರ್ಮ ಕಾಂತಿ ಹೆಚ್ಚಿಸಲು ಹಾಗೂ ಕಲೆಗಳನ್ನು ಕಡಿಮೆ ಮಾಡಲು ಹೈಲ್ಯೂರೋನಿಕ್ ಆಸಿಡ್ ಅಥವಾ ವಿಟಮಿನ್ ಸಿ ನಂತಹ ಸೀರಮ್ ಬಳಸಿ.
ಮಾಯಿಶ್ಚರೈಸರ್- ತ್ವಚೆಯ ಆರ್ದ್ರತೆ ಕಾಪಾಡಲು ಲೈಟ್ವೇಟ್ ಆದ ಮಾಯಿಶ್ಚರೈಜರ್ ಬಳಸಿರಿ.
ಸನ್ ಸ್ಕ್ರೀನ್ – ತ್ವಚೆಯು ಆರೋಗ್ಯಕರವಾಗಿರಲು ಹಾಗೂ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಸನ್ ಸ್ಕ್ರೀನ್ ಬಳಸಿ.
ಗ್ಲಾಸ್ ಸ್ಕಿನ್ ಪಡೆಯಲು ತಕ್ಷಣ ಫಲಿತಾಂಶ ನಿರೀಕ್ಷಿಸಬೇಡಿ. ನಿಯಮಿತ ಮತ್ತು ಸಹನಶೀಲತೆಯೊಂದಿಗೆ, ಸ್ಕಿನ್ ಕೇರ್ ರೂಟೀನ್ ಹಾಗೂ ಸರಿಯಾದ ಆಹಾರ ಮತ್ತು ಒಳ್ಳೆಯ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಫಲಿತಾಂಶ ನಿಖರವಾಗಿ ದೊರೆಯುತ್ತದೆ.