ಇತ್ತೀಚೆಗೆ ಸೆಲಬ್ರಿಟಿಗಳು ಬಳಸುತ್ತಿರುವ ಫೇಸ್ ಟ್ರೀಟ್ಮೆಂಟ್‌ಗಳಲ್ಲಿ ವ್ಯಾಂಪೈರ್ ಫೇಷಿಯಲ್ (Vampire Facial) ಹೆಚ್ಚು ಜನಪ್ರಿಯವಾಗಿದೆ.
ಇದರ ವೈಜ್ಞಾನಿಕ ಹೆಸರನ್ನು PRP (Platelet-Rich Plasma) ಥೆರಪಿ ಎನ್ನುತ್ತಾರೆ. ರಕ್ತದಿಂದ ಪ್ಲಾಸ್ಮಾ ತೆಗೆದು ಮುಖಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ ಅಥವಾ ಮೈಕ್ರೋನಿಡ್ಲಿಂಗ್ ಮೂಲಕ ಚರ್ಮದ ಒಳಗೆ ಸೇರಿಸಲಾಗುತ್ತದೆ. ಇದು ಚರ್ಮದ ಪುನರ್ ನವೀಕರಣ, ವಯಸ್ಸಾಗುವ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯಕ.
ಚರ್ಮದ ಪುನರ್ ನವೀಕರಣ
ನಿಮ್ಮದೇ ರಕ್ತದಿಂದ ತೆಗೆದ ಪ್ಲಾಸ್ಮಾ ವನ್ನು ಮುಖದ ಚರ್ಮದಲ್ಲಿ ಸೇರಿಸುವ ಮೂಲಕ ಹೊಸ ಚರ್ಮದ ಕೋಶಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
ಮೊಡವೆ, ಕಲೆ ಕಡಿಮೆಯಾಗುವುದು
ಮುಖದ ಮೇಲಿರುವ ಡಾರ್ಕ್ ಸ್ಪಾಟ್, ಕಲೆ ಅಥವಾ ಮೊಡವೆಗಳು ಕಡಿಮೆಯಾಗುತ್ತವೆ.
ಯುವತ್ವದ ತ್ವಚೆ
ಕಾಲಜನ್ (ನಿಮ್ಮ ಚರ್ಮಕ್ಕೆ ರಚನೆಯನ್ನು ಒದಗಿಸುವ ಪ್ರೋಟೀನ್) ಬೆಳವಣಿಗೆಯನ್ನು ಉತ್ತೇಜಿಸಿ . ಈ PRP ಥೆರಪಿ ಮುಖದ ಕಾಂತಿಯನ್ನೂ,ಕೂಡ ಹೆಚ್ಚಿಸುತ್ತದೆ.
ಮುಖದ ರಂಧ್ರಗಳು ಕುಗ್ಗುವುದು
ಮೈಕ್ರೋನಿಡ್ಲಿಂಗ್ ತಂತ್ರದಿಂದ ಚರ್ಮದ ರಂಧ್ರಗಳು ಸಣ್ಣವಾಗುತ್ತವೆ, ಇದರಿಂದ ಎಣ್ಣೆ ಅಂಶ ಮತ್ತು ಸಣ್ಣ ಗಜ್ಜಿಗಳು ಮುಖದ ಮೇಲೆ ಮೂಡುವುದುಕಡಿಮೆಯಾಗಬಹುದು.
ನೈಸರ್ಗಿಕ ವಿಧಾನ
ಇದರಲ್ಲಿ ರಾಸಾಯನಿಕಗಳಿಲ್ಲ – ನಿಮ್ಮದೇ ರಕ್ತದಿಂದ ಕೃತಕವಿಲ್ಲದೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಅಲರ್ಜಿ ಅಥವಾ ಸೋಂಕಿನ ಸಾಧ್ಯತೆ ಕಡಿಮೆ.
Vampire Facial ಒಂದು ನವೀನ, ವೈಜ್ಞಾನಿಕ, ನೈಸರ್ಗಿಕ ಹಾಗೂ ಪರಿಣಾಮಕಾರಿ ಫೇಸ್ ಟ್ರೀಟ್ಮೆಂಟ್ ಆಗಿದ್ದರೂ, ಅದನ್ನು ಮಾಡಿಸುವ ಮುನ್ನ ಅನುಭವಿಗಳಿಂದ ಸಲಹೆ ಪಡೆಯುವುದು ಮತ್ತು ನಿರ್ದಿಷ್ಟವಾದ ತಜ್ಞರ ಬಳಿ ಮಾತ್ರ ಮಾಡಿಸಿಕೊಳ್ಳುವುದು ಉತ್ತಮ.