BEAUTY | ಸ್ಕಿನ್ ಕೇರ್ ಮಾಡೋಕೆ ಟೈಮ್ ಇಲ್ವಾ? ಹಾಗಾದ್ರೆ ಈ ಕೆಲವು ಟಿಪ್ಸ್ ಫಾಲೋ ಮಾಡಿ ಸಾಕು

ಆರೋಗ್ಯ ನಮಗೆ ಎಷ್ಟು ಮುಖ್ಯವೋ ಮುಖದ ಅಂದ ಕೂಡ ಅಷ್ಟೇ ಮುಖ್ಯ. ಕಲೆಗಳಿಲ್ಲದ, ಪಿಂಪಲ್ ಫ್ರೀ ಮುಖ ಎಲ್ಲರಿಗು ಬೇಕು. ಆದ್ರೆ ಚನ್ನಾಗಿ ಸ್ಕಿನ್ ಕೇರ್ ಮಾಡೋಕೆ ಟೈಮ್ ಇರಲ್ಲ ಅಂತೀರಾ ಅಂಥವರಿಗಾಗಿ ಸುಲಭವಾದ ಕೆಲವು ಟಿಪ್ಸ್ ಕೊಡುತ್ತೇವೆ ಮುಂದೆ ಓದಿ.

ಕ್ಲೆನ್ಸಿಂಗ್ – ಪ್ರತಿದಿನ ಕ್ಲೆನ್ಸಿಂಗ್ ಮಾಡುವುದರಿಂದ ಚರ್ಮದ ಮೇಲೆ ಕಲೆ, ಧೂಳು, ಮತ್ತು ಆಯಿಲ್ ಕಡಿಮೆ ಮಾಡಬಹುದು.

ಮಾಯಿಶ್ಚರೈಸಿಂಗ್– ತೇವಾಂಶವನ್ನು ಕಾಪಾಡಲು ಮತ್ತು ಚರ್ಮವನ್ನು ಒಣಗದಂತೆ ನೋಡಿಕೊಳ್ಳಲು ಸರಿಯಾದ ಮಾಯಿಶ್ಚರೈಸರ್ ಬಳಸುವುದು ಅಗತ್ಯ.

ಸನ್ ಸ್ಕ್ರೀನ್ – ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆಗಾಗಿ SPF 50 ಇರುವ ಸನ್ ಸ್ಕ್ರೀನ್ ಬಳಸುವುದು ಉತ್ತಮ.

ಮುಖಕ್ಕೆ ಹೊರಗಡೆಯಿಂದ ಇಷ್ಟು ಮಾಡಿದ್ರೆ ಸಾಕು. ಹೊರಗಡೆ ಮಾತ್ರ ಅಲ್ಲ ನಾವು ಹೊಟ್ಟೆಗೆ ಹಾಕೋ ಆಹಾರ ಕೂಡ ಅಷ್ಟೇ ಮುಖ್ಯವಾಗಿರುತ್ತೆ.

ಡಯಟ್ – ಹಣ್ಣುಗಳು, ತರಕಾರಿಗಳು, ನಾರಿನಂಶ ಪೂರ್ಣ ಆಹಾರ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾದ ಆಹಾರ ಸೇವಿಸುವುದು ಚರ್ಮದ ಕಾಂತಿ ಹೆಚ್ಚಿಸುತ್ತದೆ.

ಹೈ ಡ್ರೆಷನ್ – ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಕುಡಿಯುವುದರಿಂದ ಚರ್ಮ ತಾಜಾ ಆಗಿರುತ್ತದೆ.

ಸ್ಲೀಪ್ – ಉತ್ತಮ ನಿದ್ರೆ ಚರ್ಮದ ಪುನಶ್ಚೇತನಕ್ಕೆ ಸಹಾಯ ಮಾಡುತ್ತದೆ ಮತ್ತು ಡಾರ್ಕ್ ಸರ್ಕಲ್ ಗಳನ್ನ ತಡೆಯುತ್ತದೆ.

ವ್ಯಾಯಾಮ ಮತ್ತು ಯೋಗ – ಪ್ರತಿ ದಿನ ವ್ಯಾಯಾಮ ಅಥವಾ ಯೋಗ ಮಾಡುವುದರಿಂದ ರಕ್ತ ಪ್ರವಾಹ ಉತ್ತಮಗೊಳ್ಳುತ್ತದೆ, ಇದರಿಂದ ಚರ್ಮ ಆರೋಗ್ಯಕರವಾಗಿರುತ್ತದೆ.

ಮಾನಸಿಕ ಅರೋಗ್ಯ – ಒತ್ತಡವನ್ನು ಕಡಿಮೆ ಮಾಡುವುದು, ಧ್ಯಾನ ಮತ್ತು ವಿಶ್ರಾಂತಿ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇವುಗಳ ಜೊತೆಗೆ ಮುಖಕ್ಕೆ ಮೇಕ್ಅಪ್ ಬಳಸುವುದನ್ನು ಕಡಿಮೆ ಮಾಡಬೇಕು. ಮೇಕ್ಅಪ್ ಬಳಸಲೇ ಬೇಕು ಎಂದಾದದಲ್ಲಿ ಉತ್ತಮಮ ಕ್ವಾಲಿಟಿಯ ಮೇಕ್ಅಪ್ ಬಳಸಿ.

ನಿತ್ಯ ಸರಿಯಾದ ಚರ್ಮದ ಆರೈಕೆಯಿಂದ ಚರ್ಮವು ಹೊಳಪಾಗಿ ಆರೋಗ್ಯಕರವಾಗಿರುತ್ತದೆ. ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಸಮತೋಲನಯುತ ಆಹಾರ ಪದ್ಧತಿಯು ಸಹ ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!