ಕಾಲಕಾಲಕ್ಕೆ ನೇಲ್ ಪಾಲಿಶ್ ಹಾಕುವುದು ಸೌಂದರ್ಯದ ಭಾಗವಾಗಿದ್ರೆ, ಅದನ್ನು ಸರಿ ರೀತಿಯಲ್ಲಿ ತೆಗೆಯುವುದು ಕೂಡ ಮುಖ್ಯ. ಆದರೆ ಕೆಲವೊಮ್ಮೆ ನೇಲ್ ಪಾಲಿಶ್ ರಿಮೂವರ್ ಮುಗಿದಿದ್ರೆ ಅಥವಾ ಲಭ್ಯವಿಲ್ಲದಿದ್ರೆ ಏನು ಮಾಡಬೇಕು? ಈ ಸಂದರ್ಭದಲ್ಲೂ ಮನೆಯಲ್ಲಿಯೇ ಲಭ್ಯವಿರುವ ಕೆಲವು ಸರಳ ಪದಾರ್ಥಗಳ ಮೂಲಕ ಸಹಜವಾಗಿ ನೇಲ್ ಪಾಲಿಶ್ ತೆಗೆಯಬಹುದಾಗಿದೆ.
ಹೇರ್ ಸ್ಪ್ರೇ : ಒಂದು ಕಾಟನ್ ಬಾಲ್‌ಗೆ ಹೇರ್ ಸ್ಪ್ರೇ ಮಾಡಿ, ಅದನ್ನು ನೇಲ್ ಪಾಲಿಶ್‌ನ ಮೇಲೆ ಮೆಲ್ಲನೆ ಒತ್ತಿ ಒರೆಸುವುದರಿಂದ ಕೆಲವೇ ಸೆಕೆಂಡುಗಳಲ್ಲಿ ನೇಲ್ ಪಾಲಿಶ್ ತೆಗೆದುಹಾಕಬಹುದು.
ಟೂತ್‌ಪೇಸ್ಟ್ ಉಪಯೋಗ: ಉಗುರುಗಳಿಂದ ನೇಲ್ ಪಾಲಿಷ್‌ನ್ನು ತೆಗೆದುಹಾಕಲು ಟೂತ್‌ಪೇಸ್ಟ್ ಪರಿಣಾಮಕಾರಿ ಮಾರ್ಗವಾಗಿದೆ. ಹಳೆಯ ಟೂತ್ ಬ್ರಷ್‌ನಿಂದ ನಿಮ್ಮ ಉಗುರುಗಳ ಮೇಲೆ ಸ್ವಲ್ಪ ಟೂತ್‌ಪೇಸ್ಟ್ ಅನ್ನು ಉಜ್ಜಿದರೆ ಸಾಕು. ಟೂತ್‌ಪೇಸ್ಟ್‌ನಲ್ಲಿ ಈಥೈಲ್ ಅಸಿಟೇಟ್ ಇರುವುದು, ಇದು ಪಾಲಿಷ್ ರಿಮೂವರ್‌ನಲ್ಲಿಯೂ ಇರುತ್ತದೆ, ಇದು ನೇಲ್ ಪಾಲಿಷ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಆಲ್ಕೋಹಾಲ್ ಬಳಸಿ ತೆಗೆಯುವುದು: ಮನೆಯಲ್ಲಿರುವ ಮೆಡಿಕಲ್ ಆಲ್ಕೋಹಾಲ್ ಅಥವಾ ಪರ್ಫ್ಯೂಮ್ ಕೂಡ ಪಾಲಿಶ್ ತೆಗೆದುಹಾಕುವಲ್ಲಿ ಸಹಕಾರಿಯಾಗಬಹುದು. ಕಾಟನ್ ಬಳಸಿ ಆಲ್ಕೋಹಾಲ್ ಹಚ್ಚಿ, ನೇಲ್ ಪಾಲಿಷ್ ಮೇಲಿಂದ ಮೇಲೆ ಒರೆಸಿದರೆ ಸಾಕು.
ನಿಂಬೆ ರಸ: ಮೈಕ್ರೋವೇವ್ ಸ್ವಚ್ಛಗೊಳಿಸುವುದರಿಂದ ಹಿಡಿದು ಬಟ್ಟೆಯ ಕಲೆಗಳನ್ನು ತೆಗೆದುಹಾಕುವವರೆಗೆ, ಎಲ್ಲದರಲ್ಲೂ ನಿಂಬೆ ಬಳಕೆಯಾಗುತ್ತದೆ. ಇದರ ಜೊತೆಗೆ ನೇಲ್ ಪಾಲಿಶ್ ಬಣ್ಣವನ್ನು ತೆಗೆದುಹಾಕುವುದು ಸೇರಿದೆ. ನಿಮ್ಮ ಉಗುರುಗಳ ಮೇಲೆ ಒಂದು ಸ್ಲೈಸ್ ಅಥವಾ ನಿಂಬೆ ರಸವನ್ನು ಇರಿಸಿ ಮತ್ತು ಅದನ್ನು ಉಜ್ಜುವ ಮೊದಲು ನಿಮ್ಮ ಉಗುರು ಬಣ್ಣ ಮೃದುವಾಗುವವರೆಗೆ ಹಾಗೆಯೇ ಬಿಡಿ.
ಈ ವಿಧಾನಗಳು ತಾತ್ಕಾಲಿಕ ಪರಿಹಾರವಷ್ಟೇ ಆಗಿದ್ದರೂ, ಅವು ಅತ್ಯಂತ ಸುರಕ್ಷಿತವಾಗಿದ್ದು, ತ್ವರಿತ ಪರಿಹಾರವನ್ನು ನೀಡುತ್ತವೆ. ಆದರೆ ನಿಯಮಿತವಾಗಿ ನೇಲ್ ಪಾಲಿಶ್ ಬಳಸುವವರು ರಿಮೂವರ್ ಸಿದ್ಧವಾಗಿರಿಸಿಕೊಳ್ಳುವುದು ಉತ್ತಮ.