Beauty | Activated Charcoal ನಲ್ಲಿದೆ ಮ್ಯಾಜಿಕ್! ಈ ಫೇಸ್ ಮಾಸ್ಕ್ ಒಮ್ಮೆ ಟ್ರೈ ಮಾಡಿದ್ರೆ ನಿಮ್ಮ ಮುಖ ಹೊಳೆಯೋದು ಗ್ಯಾರಂಟಿ

ಇತ್ತೀಚಿನ ದಶಕದಲ್ಲಿ ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಇದ್ದಿಲು (Activated Charcoal) ಪ್ರಮುಖ ಪಾತ್ರವಹಿಸುತ್ತದೆ. ಶ್ಯಾಂಪೂವಿನಿಂದ ಹಿಡಿದು ಫೇಸ್ ಮಾಸ್ಕ್‌ವರೆಗೆ Charcoal ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ವಿಶೇಷವಾಗಿ ಮುಖದ ಆರೈಕೆಯಲ್ಲಿ ಇದನ್ನು ವಿವಿಧ ರೂಪಗಳಲ್ಲಿ ಬಳಸಲಾಗುತ್ತಿದ್ದು, ಇದರಿಂದ ತ್ವಚೆಗೆ ಸ್ವಚ್ಛತೆ ಮತ್ತು softness ಲಭ್ಯವಾಗುತ್ತದೆ ಎಂಬ ನಂಬಿಕೆ ಇದೆ.

ಮಾಲಿನ್ಯ ನಿವಾರಣೆ(Removes Pollution and Toxins)
ನಗರ ಪ್ರದೇಶಗಳಲ್ಲಿ ಧೂಳು ಮತ್ತು ಮಾಲಿನ್ಯದಿಂದ ಮುಖದಲ್ಲಿ ಕೊಳೆ ಜಮೆಯಾಗುತ್ತವೆ. ಇದ್ದಿಲು ಈ ವಿಷಕಾರಿ ಅಂಶಗಳನ್ನು ತೆಗೆದು, ತ್ವಚೆಯನ್ನು ಆಳವಾಗಿ ಶುದ್ಧಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ದಿನದ ಅಂತ್ಯದಲ್ಲಿ ಈ ಮಾಸ್ಕ್ ಬಳಸಿದರೆ ಚರ್ಮ ಸದಾ ತಾಜಾ ಕಾಣುತ್ತದೆ.

Skin issues in pollution season? 10 tips to protect your skin from toxins |  Health - Hindustan Times

ಬ್ಲ್ಯಾಕ್‌ಹೆಡ್ ನಿವಾರಣೆ(Eliminates Blackheads)
ಬ್ಲ್ಯಾಕ್‌ಹೆಡ್‌ ಸಮಸ್ಯೆಯಿಂದ ಬಳಲುವವರಿಗೆ ಇದ್ದಿಲಿನ ಮಾಸ್ಕ್ ಉಪಯುಕ್ತ. ಮುಖದ ಮೇಲಿನ ಆಳವಾದ ಕಪ್ಪು ಕಲೆಗಳನ್ನು ಇದರಿಂದ ತೆಗೆದುಹಾಕಬಹುದು.

Blackheads: Causes, Symptoms, and Treatments

ಫೇಸ್ ಕ್ಲೆನ್ಸಿಂಗ್(Deep Facial Cleansing)
ತ್ವಚೆಯ ಸ್ವಚ್ಛತೆಯು ಆಕರ್ಷಣೆಯ ಮೂಲ. ವಾರಕ್ಕೊಮ್ಮೆ ಇದ್ದಿಲಿನ ಫೇಸ್ ಮಾಸ್ಕ್ ಬಳಸುವುದರಿಂದ ಎಣ್ಣೆ ಅಥವಾ ಒಣ ಚರ್ಮದ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಒಣ ತ್ವಚೆಯವರು ಬಳಿಕ ಉತ್ತಮ ಮಾಯಿಶ್ಚರೈಸರ್ ಬಳಸುವುದು ಅಗತ್ಯ.

Deep Cleansing at Home: Facial for Oily Skin That Glows

ಮೊಡವೆ ನಿವಾರಣೆ(Reduces Pimples and Acne)
ಇದ್ದಿಲಿನಲ್ಲಿ ಇರುವ ಶುದ್ಧೀಕರಣ ಶಕ್ತಿಯು ಮೊಡವೆ ಬರದಂತೆ ತಡೆಯುತ್ತದೆ. ಈ ಮಾಸ್ಕ್‌ನ್ನು ನಿಯಮಿತವಾಗಿ ಬಳಸಿ ಮುಖದ ರಂಧ್ರಗಳನ್ನು ಶುದ್ಧಗೊಳಿಸಬಹುದು.

How to Prevent Pimples from Appearing on Your Face | The Pink Foundry

ತೆರೆದ ರಂಧ್ರಗಳನ್ನು ಕಡಿಮೆ ಮಾಡುವುದು( Minimizes Open Pores)
ಅತಿ ತೆರೆದ ರಂಧ್ರಗಳಿಂದ ಮುಖದ softness ಕುಗ್ಗುತ್ತದೆ. ಇದ್ದಿಲು ಮುಖದ ಮೇಲಿನ ಈ ತೆರೆದ ರಂಧ್ರಗಳನ್ನು ಗಟ್ಟಿಗೊಳಿಸಿ, ಒತ್ತಡದಿಂದ ಮುಕ್ತಗೊಳಿಸುತ್ತದೆ.

Open Pores: Causes, Treatments, and Tips for a Smoother Complexion – Plum

ಇದ್ದಿಲಿನ ಉತ್ಪನ್ನಗಳನ್ನು ಬಳಸುವ ಮುನ್ನ ತ್ವಚಾ ತಜ್ಞರ ಸಲಹೆ ಪಡೆಯುವುದು ಉತ್ತಮ. ಪ್ರತಿ ಚರ್ಮವು ವಿಭಿನ್ನವಾದದ್ದು, ಆದರೆ ಪ್ರತಿಕ್ರಿಯೆಯು ವಿಭಿನ್ನವಾಗಿರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!