Beauty Tips | ಸೌತೆಕಾಯಿ ತಿನ್ನೋದಕ್ಕೆ ಮಾತ್ರ ಅಲ್ಲ: ಮುಖದ ಹೊಳಪಿಗೂ ಇದರ ಫೇಸ್ ಪ್ಯಾಕ್‌ ಬೆಸ್ಟ್

ಸಾಧಾರಣವಾಗಿ ಅಡುಗೆಯಲ್ಲಿ ಉಪಯೋಗಿಸುತ್ತಿರುವ ಸೌತೆಕಾಯಿ, ಆರೋಗ್ಯದೊಂದಿಗೆ ಚರ್ಮದ ಸೌಂದರ್ಯವರ್ಧನೆಗೂ ಬಹುಪಾಲು ಉಪಯುಕ್ತ. ಸೌತೆಕಾಯಿಯಲ್ಲಿರುವ ನೀರಿನ ಅಂಶ, ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಹಾಗೂ ಫೋಲಿಕ್ ಆಮ್ಲ ಚರ್ಮಕ್ಕೆ ಪೋಷಕತೆಯನ್ನು ನೀಡುತ್ತವೆ. ತ್ವಚೆ ತಾಜಾ ಮತ್ತು ತೇವಾಂಶದಿಂದ ತುಂಬಿರಬೇಕೆಂದರೆ, ಸೌತೆಕಾಯಿ ಫೇಸ್ ಪ್ಯಾಕ್ ಉತ್ತಮ ಆಯ್ಕೆಯಾಗಬಹುದು.

Close up of beautiful girl with facial mask of cucumber 	Close up of beautiful girl with facial mask of cucumber cucumber-face-pack stock pictures, royalty-free photos & images

ಕೆಲಸದ ಒತ್ತಡ, ನಿದ್ರಾಹೀನತೆ, ಮಾನಸಿಕ ಒತ್ತಡದಿಂದಾಗಿ ಚರ್ಮ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಪ್ಪು ವರ್ತುಲಗಳು, ಟ್ಯಾನ್ ಹಾಗೂ ಕಳೆಗುಂದುವ ತ್ವಚೆಯ ಲಕ್ಷಣಗಳು ಕಂಡುಬರುತ್ತವೆ. ಇದರ ಪರಿಹಾರವಾಗಿ, ತಾಜಾ ಸೌತೆಕಾಯಿಯಿಂದ ತಯಾರಿಸಿದ ಪೇಸ್ಟ್ ಮುಖಕ್ಕೆ ಹಚ್ಚಿದರೆ ಚರ್ಮಕ್ಕೆ ತಾಜಾತನ, ಉಜ್ವಲತೆ ಮರಳಿ ಬರುತ್ತದೆ.

Young woman with cucumber slices on the face. Young woman with cucumber slices on the face in a spa saloon cucumber-face-pack stock pictures, royalty-free photos & images

ಸೌತೆಕಾಯಿ ಪೇಸ್ಟ್‌ಗೆ ಮೊಸರು ಬೆರೆಸಿ, ಮುಖದ ಮೇಲಿರುವ ಟ್ಯಾನ್ ಹೋಗಲಾಡಿಸಲು ಸಹ ಸಾಧ್ಯ. ಇದರ ನಿಯಮಿತ ಬಳಕೆಯಿಂದ ಸತ್ತ ಚರ್ಮಕೋಶಗಳು ತೆಗೆದು ಹೋಗುತ್ತವೆ ಹಾಗೂ ಚರ್ಮ ಮೃದುವಾಗುತ್ತದೆ. ಸೌತೆಕಾಯಿಯ ಉರಿಯೂತ ನಿವಾರಕ ಗುಣಗಳು ಚರ್ಮದ ತಾಜಾತನವನ್ನು ಕಾಪಾಡುತ್ತವೆ.

Beauty with cucumber slices on eyes Beauty with cucumber slices on eyes cucumber-face-pack stock pictures, royalty-free photos & images

ಸೌತೆಕಾಯಿ ಫೇಸ್ ಪ್ಯಾಕ್ ತಯಾರಿಸುವ ವಿಧಾನ:
ಒಂದು ಮಧ್ಯಮ ಗಾತ್ರದ ಸೌತೆಕಾಯಿಯನ್ನು ಸ್ವಚ್ಛವಾಗಿ ತೊಳೆಯಿರಿ ಮತ್ತು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ನಂತರ ಈ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ. ಈ ಪೇಸ್ಟ್‌ಗೆ ನಾಲ್ಕು ಚಮಚ ಮೊಸರು ಸೇರಿಸಿ ಬೆರೆಸಬೇಕು. ತಯಾರಾದ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ ಸುಮಾರು 15-20 ನಿಮಿಷ ಬಿಡಿ. ಪ್ಯಾಕ್ ಸ್ವಲ್ಪ ಒಣಗಿದ ಮೇಲೆ ಮುಖವನ್ನು ತಣ್ಣಗಿನ ನೀರಿನಿಂದ ತೊಳೆಯಬೇಕು.

Woman with facial spa and cucumbers on face. Woman with facial spa and cucumbers on face. cucumber-face-pack stock pictures, royalty-free photos & images

ಇದು ಚರ್ಮಕ್ಕೆ ತೇವಾಂಶ, ಹೊಳಪು ಹಾಗೂ ನೈಸರ್ಗಿಕ ಶಕ್ತಿ ನೀಡುತ್ತದೆ. ಕೃತಕ ಬ್ಯೂಟಿ ಕ್ರಿಮ್‌ಗಳಿಗೆ ಬದಲಾಗಿ, ಈ ನೈಸರ್ಗಿಕ ಮನೆಮದ್ದು ಹೆಚ್ಚು ಸುರಕ್ಷಿತವಾಗಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!