ಪ್ರಕೃತಿಯ ಅಮೂಲ್ಯ ಕೊಡುಗೆಗಳ ಪೈಕಿ ಶ್ರೀಗಂಧದ ಎಣ್ಣೆ ಪ್ರಮುಖವಾದದ್ದು. ಇದರ ಸುಗಂಧ ಮಾತ್ರವಲ್ಲದೆ, ಔಷಧೀಯ ಗುಣಗಳು ನಮ್ಮ ದೈನಂದಿನ ಆರೈಕೆ ಹಾಗೂ ಆರೋಗ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಇಲ್ಲಿ ಶ್ರೀಗಂಧದ ಎಣ್ಣೆಯಿಂದ ಲಭ್ಯವಾಗುವ ಪ್ರಮುಖ ಲಾಭಗಳನ್ನು ತಿಳಿದುಕೊಳ್ಳೋಣ.
ಮೊಡವೆಗೆ ನೈಸರ್ಗಿಕ ಪರಿಹಾರ
ಬ್ಯಾಕ್ಟೀರಿಯಾ ವಿರೋಧಿ ಗುಣವಿರುವ ಶ್ರೀಗಂಧದ ಎಣ್ಣೆ ಮೊಡವೆಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ತೆಂಗಿನಕಾಯಿ ಅಥವಾ ಜೊಜೊಬಾ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಚರ್ಮದ ಉರಿಯೂತ ಕಡಿಮೆಯಾಗುತ್ತದೆ. ರೋಸ್ ವಾಟರ್ ಜೊತೆಗೆ ಕೂಡ ಬಳಸಬಹುದು.
ಒಣ ಚರ್ಮಕ್ಕೆ ತಕ್ಷಣದ ತಂಪು
ಒಣ ಚರ್ಮದಿಂದ ಬಳಲುವವರಿಗೆ ಇದು ನೈಸರ್ಗಿಕ ಹೈಡ್ರೇಶನ್ ನೀಡುತ್ತದೆ. ಬಾದಾಮಿ ಅಥವಾ ಆಲಿವ್ ಎಣ್ಣೆಗೆ ಶ್ರೀಗಂಧದ ಎಣ್ಣೆ ಬೆರೆಸಿ ಹಚ್ಚಿದರೆ ಚರ್ಮಕ್ಕೆ ಮೃದುತನ ವಾಪಸು ಬರುತ್ತದೆ. ಇದು ದೈನಂದಿನ ಮಾಯಿಶ್ಚರೈಸರ್‌ನಂತೆ ಬಳಸಬಹುದು.
ಬಿಸಿಲಿಂದ ಸುಟ್ಟ ಚರ್ಮಕ್ಕೆ ಶಮನ
ಅಲೋವೆರಾ ಜೆಲ್ ಜೊತೆ ಶ್ರೀಗಂಧದ ಎಣ್ಣೆ ಬೆರೆಸಿ ಹಚ್ಚಿದರೆ ಬಿಸಿಲಿನಿಂದ ಉಂಟಾಗುವ ಕೆಂಪು, ಉರಿಯೂತ ಇತ್ಯಾದಿ ಸಮಸ್ಯೆಗಳಿಂದ ರಕ್ಷಣೆ ಸಿಗುತ್ತದೆ. ಸಣ್ಣ ಸುಟ್ಟ ಗಾಯಗಳಿಗೂ ಇದು ಉಪಯೋಗಿ.
ಮುಖದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ
ಆಂಟಿಆಕ್ಸಿಡೆಂಟ್‌ಗಳ ಸಮೃದ್ಧಿಯನ್ನು ಹೊಂದಿರುವ ಶ್ರೀಗಂಧದ ಎಣ್ಣೆ ವಯಸ್ಸಿನ ಗುರುತುಗಳನ್ನು ತಡೆಹಿಡಿಯಲು ಸಹಾಯಕ. ಅರ್ಗಾನ್ ಎಣ್ಣೆ ಅಥವಾ ವಿಟಮಿನ್-ಇ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಮೃದುವಾಗಿ ಮಸಾಜ್ ಮಾಡಿದರೆ ಸುಕ್ಕುಗಳು ಕಡಿಮೆಯಾಗುತ್ತವೆ.
ಒತ್ತಡ, ಆತಂಕದಿಂದ ಮುಕ್ತಿಗೆ ಸೂಕ್ತ ಪರಿಹಾರ
ಶಾಂತಗೊಳಿಸುವ ಪರಿಮಳದೊಂದಿಗೆ ಶ್ರೀಗಂಧದ ಎಣ್ಣೆ ಒತ್ತಡ ನಿವಾರಣೆಗೆ ಅತ್ಯುತ್ತಮ. ಡಿಫ್ಯೂಸರ್‌ನಲ್ಲಿ ಹಾಕಿ ಅಥವಾ ನಾಡಿ ಬಿಂದುಗಳಿಗೆ ಹಚ್ಚಿದರೆ ಮನಸ್ಸು ತಾಜಾ, ಶಾಂತವಾಗುತ್ತದೆ. ಅರೋಮಾಥೆರಪಿಯಲ್ಲಿ ಇದರ ಬಳಕೆ ಹೆಚ್ಚಿದೆ.
ತಲೆಹೊಟ್ಟಿಗೆ ಟ್ರಿಟ್ಮೆಂಟ್
ಶಾಂಪೂಗೆ ಶ್ರೀಗಂಧದ ಎಣ್ಣೆ ಬೆರೆಸಿ ಬಳಸಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ. ತೆಂಗಿನ ಎಣ್ಣೆ ಜೊತೆಗೆ ಮಿಶ್ರಣ ಮಾಡಿ ತಲೆಗೆ ಮಸಾಜ್ ಮಾಡಿದರೆ ತುರಿಕೆ ಕೂಡ ನಿಂತು, ಕೂದಲು ಆರೋಗ್ಯಕರವಾಗುತ್ತದೆ.
ನಿದ್ರೆಯ ಗುಣಮಟ್ಟ ಉತ್ತಮವಾಗುತ್ತದೆ
ಮಲಗುವ ಮುನ್ನ ಕೊಠಡಿಯಲ್ಲಿ ಈ ಎಣ್ಣೆ ಬಳಸಿದರೆ ಉಸಿರಾಟದ ಮೂಲಕ ಮನಸ್ಸಿಗೆ ತಂಪು ತರಲು ಸಹಾಯವಾಗುತ್ತದೆ. ಲ್ಯಾವೆಂಡರ್ ಎಣ್ಣೆಯೊಂದಿಗೆ ಸಂಯೋಜಿಸಿದರೆ ಹೆಚ್ಚಿನ ಫಲಿತಾಂಶ ಸಿಗುತ್ತದೆ.
ನೈಸರ್ಗಿಕ ಡಿಯೋಡ್ರಂಟ್ ಆಯ್ಕೆಯಾಗಿ
ಶ್ರೀಗಂಧದ ಪರಿಮಳದೊಂದಿಗೆ ಟಿಟ್ರೀ ಎಣ್ಣೆ ಹಾಗೂ ತೆಂಗಿನ ಎಣ್ಣೆ ಮಿಶ್ರಣ ಮಾಡಿ ನಾಡಿ ಬಿಂದುಗಳಿಗೆ ಹಚ್ಚಿದರೆ ತಾಜಾ ಅನುಭವ ನೀಡುತ್ತದೆ. ಇದು ದೇಹದ ದುರ್ವಾಸನೆಯ ವಿರುದ್ಧ ನೈಸರ್ಗಿಕವಾಗಿ ಹೋರಾಡುತ್ತದೆ.