ತುಟಿಗಳು ಮೃದುವಾಗಿ, ಗುಲಾಬಿ ಬಣ್ಣದಾಗಿದ್ರೆ ಎಂಥಾ ಚೆಂದ! ಆದರೆ ಈ ರೀತಿಯ ತುಟಿಗಳಿಗಾಗಿ ಯುವತಿಯರು, ಮಹಿಳೆಯರು ದುಬಾರಿ ಲಿಪ್‌ಬಾಮ್, ಕ್ರೀಮ್‌ಗಳತ್ತ ತಿರುಗುತ್ತಿದ್ದಾರೆ. ಇದರಿಂದ ಕೆಲವೊಮ್ಮೆ ಹಾನಿಯೂ ಆಗಬಹುದು. ಆದರೆ, ನಿಮ್ಮ ಮನೆಯಲ್ಲಿ ಇರುವ ಸರಳ ಹಾಗೂ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಆರೋಗ್ಯಕರ ಹಾಗೂ ನೈಸರ್ಗಿಕವಾಗಿ ಮೃದು ತುಟಿಗಳನ್ನ ಪಡೆಯಬಹುದು. ಹೇಗೆ ಎಂಬುದನ್ನು ನೋಡೋಣ.
ಲಿಪ್ ಸ್ಕ್ರಬ್ ಉಪಯೋಗಿಸಿ
ಸತ್ತ ಜೀವಕೋಶಗಳನ್ನ ತೆಗೆದುಹಾಕಿ ಹೊಸ ಚರ್ಮ ಹುಟ್ಟಲು ನೆರವಾಗುವ ಅತ್ಯುತ್ತಮ ಪರಿಹಾರ ಲಿಪ್ ಸ್ಕ್ರಬ್. ಸಕ್ಕರೆ, ಜೇನುತುಪ್ಪ ಮತ್ತು ಆಲಿವ್ ಆಯಿಲ್ ಅನ್ನು ಮಿಶ್ರ ಮಾಡಿ, ತುಟಿಗೆ ಮೃದುವಾಗಿ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ. ವಾರಕ್ಕೆ 2 ಬಾರಿ ಮಾಡಿ.
ಮೃದುವಾದ ಬ್ರಷ್ ಬಳಸಿ ತುಟಿಗೆ ಮಸಾಜ್ ಮಾಡಿ
ಮೇಕಪ್ ಬ್ರಷ್‌ನಂತಹ ಮೃದುವಾದ ಬ್ರಷ್‌ಗಳನ್ನು ಉಪಯೋಗಿಸಿ ತುಟಿಗಳ ಮೇಲೆ ನಿಧಾನವಾಗಿ ಉಜ್ಜಿ. ಇದು ರಕ್ತ ಸಂಚನೆಯನ್ನು ಉತ್ತೇಜಿಸಿ, ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಕಾರಿ.
ನೀರು ಹೆಚ್ಚು ಕುಡಿಯಿರಿ
ತುಟಿಗಳ ಒಣಗುವಿಕೆಗೆ ಪ್ರಮುಖ ಕಾರಣ ‘ಡಿ ಹೈಡ್ರೇಷನ್’. ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರು ಕುಡಿಯುವುದು ತುಟಿಗೆ ಆರ್ದ್ರತೆಯನ್ನು ಒದಗಿಸಿ, ಬಿಳಿ ಬಣ್ಣದ ತುಟಿ ಸಮಸ್ಯೆ ತಡೆಯುತ್ತದೆ.
ತುಟಿಗಳನ್ನು ನೆಕ್ಕಬೇಡಿ
ಒಣಗಿದ ತುಟಿಗಳಿಗೆ ನಾಲಿಗೆ ತಾಕಿಸಿ ನೆಕ್ಕುವುದರಿಂದ ಹೆಚ್ಚು ಒಣಗಿ ಬಿರುಕು ಉಂಟಾಗುತ್ತದೆ. ಬದಲಿಗೆ ಲಿಪ್ ಬಾಮ್ ಅಥವಾ ಹೋಮ್‌ಮೇಡ್ ಸ್ಕ್ರಬ್ ಬಳಸಿ ಆರ್ದ್ರತೆ ಕಾಯ್ದುಕೊಳ್ಳಿ.
ಗುಲಾಬಿ ದಳಗಳಿಂದ ನೈಸರ್ಗಿಕ ಥೆರಪಿ
ಒಣಗಿಸಿದ ಗುಲಾಬಿ ಹೂವಿನ ದಳಗಳನ್ನು ನೀರಿನಲ್ಲಿ ನೆನೆಸಿ, ಆ ನೀರನ್ನು ತುಟಿಗೆ ಹಚ್ಚುವುದು ಅದ್ಭುತ ಫಲಿತಾಂಶ ನೀಡುತ್ತದೆ. ವಾರದಲ್ಲಿ ಮೂರ್ನಾಲ್ಕು ಬಾರಿ ಮಾಡಿದರೆ ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.
ಬೀಟ್ರೂಟ್ ಲಿಪ್‌ಬಾಮ್
ಬೀಟ್ರೂಟ್ ರಸದಿಂದ ನೈಸರ್ಗಿಕ ಲಿಪ್‌ಬಾಮ್ ತಯಾರಿಸಿ. ಬೀಟ್ರೂಟ್‌ನಲ್ಲಿರುವ ಜೈವಿಕ ಗುಣಧರ್ಮಗಳು ತ್ವಚೆಗೆ ಆರೋಗ್ಯ ನೀಡುವುದು ಮಾತ್ರವಲ್ಲ, ನೈಸರ್ಗಿಕ ಬಣ್ಣವೂ ನೀಡುತ್ತದೆ.
ನೈಸರ್ಗಿಕ ಲಿಪ್‌ಬಾಮ್ ಆಯ್ಕೆಮಾಡಿ
ಜೇನುಮೇಣ, ತೆಂಗಿನ ಎಣ್ಣೆ ಮತ್ತು ಶಿಯಾ ಬೆಣ್ಣೆ ಹೊಂದಿರುವ ಲಿಪ್‌ಬಾಮ್‌ಗಳನ್ನು ಬಳಸಿರಿ. ಯಾವುದೇ ಕೃತಕ ಪರಿಮಳ ಅಥವಾ ರಾಸಾಯನಿಕವಿರುವ ಉತ್ಪನ್ನಗಳಿಂದ ದೂರವಿರಿ.