ಮುಖದ ಅಂದವನ್ನು ಹಾಳುಮಾಡುವ ಬ್ಲ್ಯಾಕ್‌ಹೆಡ್ಸ್ ಸಮಸ್ಯೆ ಈಗ ಎಲ್ಲರಿಗೂ ಚಿರಪರಿಚಿತ. ವಿಶೇಷವಾಗಿ ಮೂಗಿನ ತುದಿಯಲ್ಲಿ ಕಪ್ಪಗಾಗಿ ಅಥವಾ ಬೆಳ್ಳಗೆ ಕಂಡುಬರುವ ಈ ಚುಕ್ಕೆಗಳು ನೋಡಲು ಅಸಹ್ಯವೆನಿಸುತ್ತವೆ. ಪಾರ್ಲರ್‌ನಲ್ಲಿ ಕ್ಲೀನ್‌ಅಪ್ ಮಾಡಿಸಿ ತೆಗೆಸಿಕೊಳ್ಳುವುದು ಸಾಮಾನ್ಯವಾದರೂ, ಪ್ರತಿ ತಿಂಗಳು ಖರ್ಚು ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದಲೇ ಈ ಬ್ಲ್ಯಾಕ್‌ಹೆಡ್ಸ್ ನಿವಾರಣೆಗೆ ಮನೆಯಲ್ಲೇ ಕೈಗೆಟುಕುವ ಪದಾರ್ಥಗಳನ್ನು ಬಳಸಿ ತೆಗೆಯಬಹುದು.
ಸ್ಟೀಮ್ ಮತ್ತು ಮುಲ್ತಾನಿ ಮಿಟ್ಟಿ ಮ್ಯಾಜಿಕ್
ಮೊದಲಿಗೆ ಚರ್ಮದ ರಂಧ್ರಗಳನ್ನು ತೆಗೆಯಬೇಕಾದರೆ ಸ್ಟೀಮ್ ಬಹಳ ಪರಿಣಾಮಕಾರಿ. ಬಟ್ಟಲಿನಲ್ಲಿ ಬೆಚ್ಚಗಿನ ನೀರು ಹಾಕಿ ಮುಖಕ್ಕೆ 5-7 ನಿಮಿಷಗಳ ಕಾಲ ಸ್ಟೀಮ್ ಕೊಡಿ. ನಂತರ ಮುಲ್ತಾನಿ ಮಿಟ್ಟಿಗೆ ಅಲೋವೆರಾ ಜೆಲ್ ಅಥವಾ ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತೊಳೆಯಿರಿ. ಇದು ರಂಧ್ರಗಳಲ್ಲಿರುವ ಕೊಳೆಯನ್ನು ಹಾಗೂ ಬ್ಲ್ಯಾಕ್‌ಹೆಡ್ಸ್ ತೆಗೆದುಹಾಕುತ್ತದೆ.
ಜೇನುತುಪ್ಪ ಮತ್ತು ದಾಲ್ಚಿನ್ನಿ ಮಿಶ್ರಣ
ಒಂದು ನೈಸರ್ಗಿಕ ಕಾಂಬಿನೇಷನ್ ಇದು. ಒಂದು ಚಮಚ ಜೇನುತುಪ್ಪ ಮತ್ತು ಚಿಟಿಕೆ ದಾಲ್ಚಿನ್ನಿ ಪುಡಿ ಸೇರಿಸಿ ಬ್ಲ್ಯಾಕ್‌ಹೆಡ್ಸ್ ಮೇಲೆ ಹಚ್ಚಿ. 15 ನಿಮಿಷ ಬಿಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಅರಿಶಿನ – ಕಡಲೆ ಹಿಟ್ಟು ಪೇಸ್ಟ್
ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ, ಕಡಲೆ ಹಿಟ್ಟು ಸ್ಕ್ರಬ್ ಮಾಡುವಂತಹದು. ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿ, ಇದನ್ನು ಮೂಗು ಮತ್ತು ಗಲ್ಲದ ಮೇಲೆ ಹಚ್ಚಿ. 15 ನಿಮಿಷ ಬಿಟ್ಟು ಒಣಗಿದ ಮೇಲೆ ನಿಧಾನವಾಗಿ ಉಜ್ಜಿಕೊಂಡು ತೊಳೆಯಿರಿ.
ಟೊಮೇಟೊ ಸ್ಕ್ರಬ್
ಟೊಮೇಟೊವನ್ನು ಅರ್ಧಕ್ಕೆ ಕತ್ತರಿಸಿ ಮುಖದ ಮೇಲೂ ವಿಶೇಷವಾಗಿ ಮೂಗಿನ ತುದಿಯಲ್ಲಿ ನಿಧಾನವಾಗಿ ಉಜ್ಜಿ. ಟೊಮೇಟೊ ರಸವನ್ನು 10 ನಿಮಿಷ ಬಿಟ್ಟು ತೊಳೆಯಿರಿ.
ಅಕ್ಕಿ ಸ್ಕ್ರಬ್
ಒರಟಾಗಿ ಪುಡಿಮಾಡಿದ ಅಕ್ಕಿಯನ್ನು ಮೊಸರು ಅಥವಾ ಹಸಿ ಹಾಲಿಗೆ ಸೇರಿಸಿ ಸ್ಕ್ರಬ್ ರೂಪಿಸಿ. ವಾರಕ್ಕೆ 1-2 ಬಾರಿ ಈ ಮಿಶ್ರಣದಿಂದ ಸ್ಕ್ರಬ್ ಮಾಡಿದರೆ ಚರ್ಮ ಮೃದುವಾಗುತ್ತದೆ. ಅಕ್ಕಿಯಲ್ಲಿರುವ ಪೋಷಕಾಂಶಗಳು ಚರ್ಮವನ್ನು ಪೋಷಿಸುತ್ತವೆ.