ಚರ್ಮದ ಆರೋಗ್ಯ ಮತ್ತು ಕಂಗೊಳಿಸುವ ತಾಜಾತನ ಕಾಪಾಡಿಕೊಳ್ಳಲು ಫೇಸ್ ಪ್ಯಾಕ್ ಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಯೊಂದು ಉತ್ಪನ್ನವೂ ಎಲ್ಲರಿಗೂ ಒಂದೇ ರೀತಿಯಾಗಿ ಸೂಕ್ತವಾಗುವುದಿಲ್ಲ. ನಿಮ್ಮ ಚರ್ಮ ಎಣ್ಣೆಯುಕ್ತವಾಗಿದೆಯಾ, ಒಣತ್ವಚೆಯ ಅಥವಾ ಸಾಮಾನ್ಯ ಚರ್ಮವಾ ಎಂಬುದನ್ನು ತಿಳಿದುಕೊಂಡು, ಅದಕ್ಕೆ ತಕ್ಕ ಫೇಸ್ ಪ್ಯಾಕ್ ಆಯ್ಕೆ ಮಾಡುವುದು ಮುಖ್ಯ.
ಫೇಸ್ ಪ್ಯಾಕ್ ಬಳಸುವ ಮೊದಲು, ಅದು ನಿಮ್ಮ ಚರ್ಮಕ್ಕೆ ಯಾವುದೇ ಅಲರ್ಜಿ ಅಥವಾ ಪ್ರತಿಕ್ರಿಯೆ ಉಂಟುಮಾಡುವುದಿಲ್ಲ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಅಗತ್ಯ. ಹಣ್ಣುಗಳು, ತರಕಾರಿಗಳು, ಮೊಸರು, ಜೇನುತುಪ್ಪ ಮುಂತಾದ ಮನೆಯಲ್ಲೇ ಲಭ್ಯವಿರುವ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್ ಗಳು ಸುರಕ್ಷಿತವಾಗಿದ್ದು, ಚರ್ಮದ ಕಾಂತಿ ಹೆಚ್ಚಿಸಲು ಸಹಾಯಕ.
ಫೇಸ್ ಪ್ಯಾಕ್ ಹಚ್ಚುವ ಸರಿಯಾದ ವಿಧಾನ
ಫೇಸ್ ಪ್ಯಾಕ್ ಹಾಕುವ ಮೊದಲು ಸೌಮ್ಯ ಕ್ಲೆನ್ಸರ್ ಬಳಸಿ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.
ಮೃದುವಾದ ಬ್ರಷ್ ಅಥವಾ ಬೆರಳುಗಳ ಸಹಾಯದಿಂದ ಮುಖ ಮತ್ತು ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ. ಕಣ್ಣು ಹಾಗೂ ತುಟಿಗಳ ಭಾಗಗಳಿಗೆ ಹಚ್ಚಬೇಡಿ.
ಎಕ್ಸ್ಫೋಲಿಯೇಟಿಂಗ್ ಮಾಸ್ಕ್ ಆಗಿದ್ದರೆ, ಹಚ್ಚಿದ ಬಳಿಕ ಕೆಲವು ನಿಮಿಷಗಳ ಕಾಲ ವೃತ್ತಾಕಾರವಾಗಿ ಮಸಾಜ್ ಮಾಡಿ.
ಸಾಮಾನ್ಯ ಫೇಸ್ಪ್ಯಾಕ್ಗಳನ್ನು 15-20 ನಿಮಿಷ ಬಿಟ್ಟರೆ ಸಾಕು. ಆದರೆ ಹೈಡ್ರೇಟಿಂಗ್ ಅಥವಾ ವಯೋವೃದ್ಧಿ ವಿರೋಧಿ ಮಾಸ್ಕ್ಗಳನ್ನು ಹೆಚ್ಚು ಸಮಯ ಬಿಡಬಹುದು.
ಪ್ಯಾಕ್ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದು, ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ.
ತೊಳೆಯುವ 30 ನಿಮಿಷಗಳ ನಂತರ ಟೋನರ್, ಸೀರಮ್ ಹಾಗೂ ಮಾಯಿಶ್ಚರೈಸರ್ ಬಳಸಿ. ಸನ್ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬೇಡಿ.
ನೈಸರ್ಗಿಕ ಫೇಸ್ ಪ್ಯಾಕ್ ಆಯ್ಕೆಗಳು
ಎಣ್ಣೆ ಚರ್ಮಕ್ಕೆ: ನಿಂಬೆ ರಸ + ಮೊಸರು
ಒಣ ಚರ್ಮಕ್ಕೆ: ಜೇನುತುಪ್ಪ + ಹಾಲು
ಸಾಮಾನ್ಯ ಚರ್ಮಕ್ಕೆ: ಬಾಳೆಹಣ್ಣು + ಹಾಲಿನ ಕ್ರೀಮ್
ಫೇಸ್ ಪ್ಯಾಕ್ ಗಳನ್ನು ನಿಯಮಿತವಾಗಿ, ಆದರೆ ಸರಿಯಾದ ವಿಧಾನದಲ್ಲಿ ಬಳಸಿದರೆ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಮಾರುಕಟ್ಟೆಯ ಉತ್ಪನ್ನಗಳ ಜೊತೆಗೆ ನೈಸರ್ಗಿಕ ಆಯ್ಕೆಗಳನ್ನೂ ಪ್ರಯೋಗಿಸಿ. ಮುಖ್ಯವಾಗಿ, ಫೇಸ್ ಪ್ಯಾಕ್ ಹಚ್ಚುವ ಮೊದಲು ಚರ್ಮಕ್ಕೆ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷಿಸುವುದು ಅಗತ್ಯ. ಸರಿಯಾದ ಆರೈಕೆ ಮೂಲಕ ಚರ್ಮ ತಾಜಾವಾಗಿ, ಕಂಗೊಳಿಸುವ ಮತ್ತು ಆರೋಗ್ಯಕರವಾಗಿರುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)