ಬೆಳಿಗ್ಗೆ ಎದ್ದಾಗ ಕೆಲವೊಮ್ಮೆ ಮುಖದಲ್ಲಿ ಊತ, ಒಣಗಿದ ತ್ವಚೆ, ಕಪ್ಪು ಕಲೆಗಳು, ಅಥವಾ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇವು ಕೆಲವವರಿಗೆ ಮಾತ್ರ ಕಾಣಿಸಿಕೊಳ್ಳುತ್ತವೆ. ಕೆಲವು ಬಾರಿ ಈ ಲಕ್ಷಣಗಳು ಮುಖ ತೊಳೆಯುದ ನಂತರ ಕಡಿಮೆಯಾಗಬಹುದು. ಆದರೆ ಮುಂಜಾನೆಯ ಚರ್ಮದ ಆರೈಕೆಗಾಗಿ ನೀವು ಗುಲಾಬಿ ನೀರು ಅಥವಾ ರೋಸ್ ವಾಟರ್ ಅನ್ನು ಬಳಸಿ ನೋಡಿದರೆ ನೈಸರ್ಗಿಕ ಕಾಂತಿ ಸಿಗುತ್ತದೆ. ಅಲ್ಲದೆ, ರೋಸ್ ವಾಟರ್ ಜೊತೆ ಇನ್ನೂ ಕೆಲವು ಸಾಮಗ್ರಿಗಳನ್ನು ಸೇರಿಸಿ ಬಳಸಿದರೆ ಇದರ ಪರಿಣಾಮ ಹೆಚ್ಚಾಗುತ್ತದೆ.
ಟೋನರ್ ಆಗಿ ರೋಸ್ ವಾಟರ್ ಬಳಸಿ
ಮುಖ ತೊಳೆದ ನಂತರ ಹತ್ತಿ ಅಥವಾ ಸ್ಪ್ರೇ ಬಾಟಲ್‌ನಿಂದ ನೇರವಾಗಿ ರೋಸ್ ವಾಟರ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ. ಇದು ನೈಸರ್ಗಿಕ ಟೋನರ್ ಆಗಿ ಕೆಲಸ ಮಾಡುತ್ತದೆ. ರಂಧ್ರಗಳನ್ನು ಬಿಗಿಗೊಳಿಸುವುದರೊಂದಿಗೆ ತ್ವಚೆಯ pH ಸಮತೋಲನವನ್ನು ಸಹ ಕಾಪಾಡುತ್ತದೆ.
ಅಲೋವೆರಾ ಜೆಲ್ ಮತ್ತು ರೋಸ್ ವಾಟರ್
ಸೂರ್ಯನ ಕಿರಣಗಳಿಂದ ಉಂಟಾಗುವ ಸನ್‌ಬರ್ನ್, ಉರಿಯೂತ ಅಥವಾ ಕೆಂಪು ಚರ್ಮದ ಸಮಸ್ಯೆಗಳಿಗೆ ಪರಿಹಾರವಾಗಿ ಈ ಮಿಶ್ರಣ ಸಹಾಯಕ. 2 ಚಮಚ ಅಲೋವೆರಾ ಜೆಲ್‌ಗೆ 2 ಚಮಚ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ. 20-25 ನಿಮಿಷಗಳ ನಂತರ ತೊಳೆಯಿರಿ.
ವಿಟಮಿನ್ E ಮತ್ತು ರೋಸ್ ವಾಟರ್
ವಿಟಮಿನ್ E ನಲ್ಲಿ ಅಂಶಗಳು ಚರ್ಮದ ಪೋಷಣೆಗೆ ಮತ್ತು ಪುನರುಜ್ಜೀವನಕ್ಕೆ ನೆರವಾಗುತ್ತವೆ. 1 ವಿಟಮಿನ್ E ಕ್ಯಾಪ್ಸೂಲ್ ಅನ್ನು 2 ಟೇಬಲ್ ಸ್ಪೂನ್ ರೋಸ್ ವಾಟರ್ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ.
ಅಕ್ಕಿ ನೀರು ಮತ್ತು ರೋಸ್ ವಾಟರ್
ಅಕ್ಕಿ ನೀರಿನಲ್ಲಿ ವಿಟಮಿನ್‌ಗಳು ಮತ್ತು ಖನಿಜಗಳಿವೆ. ರೋಸ್ ವಾಟರ್ ಜೊತೆಗೆ ಮಿಶ್ರಣ ಮಾಡಿದರೆ ಇದು ಚರ್ಮಕ್ಕೆ ಮೃದುವು ಮತ್ತು ಹೊಳೆಯುವ ಕಾಣಿಕೆ ನೀಡುತ್ತದೆ. ಸಮಾನ ಪ್ರಮಾಣದಲ್ಲಿ ಅಕ್ಕಿ ನೀರು ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಹಚ್ಚಿ.
ಮುಖ ತೊಳೆಯುವ ನೀರಿನಲ್ಲಿ ರೋಸ್ ವಾಟರ್ ಸೇರಿಸಿ
ನೀರಿನಲ್ಲಿ ಸ್ವಲ್ಪ ರೋಸ್ ವಾಟರ್ ಸೇರಿಸಿ ಮುಖ ತೊಳೆಯುವುದರಿಂದ ತ್ವಚೆಗೆ ತಂಪಾದ ಅನುಭವವನ್ನು ನೀಡುತ್ತದೆ. ಇದರಿಂದ ಚರ್ಮ ತಾಜಾ, ನೈಸರ್ಗಿಕವಾಗಿ ಹೊಳೆಯುವಂತೆ ತೋರಿಸುತ್ತದೆ.
ಇವನ್ನೆಲ್ಲ ಬೆಳಿಗ್ಗೆ ಮುಖ ತೊಳೆದ ನಂತರ ಹಚ್ಚುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ನೈಸರ್ಗಿಕವಾಗಿ ಕಾಂತಿಯುತ ತ್ವಚೆಗಾಗಿ, ರೋಜ್ ವಾಟರ್ ಉಪಯೋಗಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.