Beauty Tips | ಮುಖದ ಮೇಲಿರೋ ಹಠಮಾರಿ ಕಪ್ಪು ಕಲೆಗಳನ್ನು ತೆಗೆಯೋಕೆ ಈ 2 ವಸ್ತುಗಳು ಸಾಕು!

ಮುಖದಲ್ಲಿ ಕಂಡುಬರುವ ಪಿಗ್ಮೆಂಟೇಶನ್ ಸಮಸ್ಯೆಯಿಂದ ಹಲವರು ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ದುಬಾರಿ ಸೀರಮ್ ಅಥವಾ ಕ್ರೀಮ್‌ಗಳನ್ನು ಬಳಸಿದರೂ ಸಮಸ್ಯೆ ನಿವಾರಣೆಯಾಗದ ಸಂದರ್ಭದಲ್ಲೂ, ಮನೆಯಲ್ಲೇ ಲಭ್ಯವಿರುವ ಸರಳ ಪದಾರ್ಥಗಳಿಂದ ಪರಿಣಾಮಕಾರಿ ಪರಿಹಾರವನ್ನು ಪಡೆಯಬಹುದಾಗಿದೆ.

ದಾಲ್ಚಿನ್ನಿಯು ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುವುದರೊಂದಿಗೆ ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ಮತ್ತೊಂದೆಡೆ, ಜೇನುತುಪ್ಪ ನೈಸರ್ಗಿಕ ತೇವಾಂಶ ಕಾಪಾಡುವ ಪದಾರ್ಥವಾಗಿದ್ದು, ಚರ್ಮವನ್ನು ಹೈಡ್ರೀಟ್ ಮಾಡುತ್ತದೆ ಮತ್ತು ಹೊಳಪನ್ನು ನೀಡುತ್ತದೆ.

Sticks and ground ceylon cinnamon Sticks and ground ceylon cinnamon with wood spoon on wooden table cinnamon sticks stock pictures, royalty-free photos & images

ಪಿಗ್ಮೆಂಟೇಶನ್ ಸಮಸ್ಯೆಗೆ ಎರಡು ವಿಧಾನಗಳನ್ನು ಬಳಸಬಹುದು. ಮೊದಲನೆಯದಾಗಿ, ದಾಲ್ಚಿನ್ನಿ ತುಂಡುಗಳನ್ನು ಮೂರು ಗಂಟೆಗಳ ಕಾಲ ಜೇನುತುಪ್ಪದಲ್ಲಿ ನೆನೆಸಿಡಿ. ಈ ಮಿಶ್ರಣವನ್ನು ಫೇಸ್ ಮಾಸ್ಕ್‌ನಂತೆ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ವಾರಕ್ಕೆ 2-3 ಬಾರಿ ಇದನ್ನು ಮಾಡಿದರೆ ಪಿಗ್ಮೆಂಟೇಶನ್‌ನಲ್ಲಿ ಬದಲಾವಣೆ ಕಾಣಬಹುದು.

Honey and cinnamon Honey and cinnamon composition. cinnamon sticks AND HONEY stock pictures, royalty-free photos & images

ಇನ್ನೊಂದು ವಿಧಾನವಾಗಿ, ಈ ಮಿಶ್ರಣದ ಒಂದು ಟೀಚಮಚವನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ, ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದು ಶರೀರವನ್ನು ನಿರ್ವಿಷಗೊಳಿಸುವುದರ ಜೊತೆಗೆ ಉರಿಯೂತ ಕಡಿಮೆಮಾಡಿ, ಚರ್ಮದ ಒಳಗಿನಿಂದ ಸಮಸ್ಯೆ ಪರಿಹರಿಸಲು ನೆರವಾಗುತ್ತದೆ.

jar of honey with honeycomb jar of honey with honeycomb on wooden table  HONEY stock pictures, royalty-free photos & images

ಈ ನೈಸರ್ಗಿಕ ವಿಧಾನವು ಪಿಗ್ಮೆಂಟೇಶನ್ ನಿವಾರಣೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವಾಗಿದ್ದು, ಚರ್ಮಕ್ಕೆ ಹೊಸತಾದ ಜೀವವನ್ನು ತುಂಬುತ್ತದೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!