ಮಹಿಳೆಯರಿಗೆ ಹಲವಾರು ಬಾರಿ ಶೇವಿಂಗ್ ಅಥವಾ ವ್ಯಾಕ್ಸಿಂಗ್ ನಲ್ಲಿ ಯಾವುದು ಬೆಸ್ಟ್ ಎಂಬ ಪ್ರಶ್ನೆ ಎದುರಾಗಿರುತ್ತದೆ. ಎರಡೂ ವಿಧಾನಗಳಿಗೂ ತಮ್ಮದೇ ಆದ ಪ್ರಯೋಜನ ಮತ್ತು ದೋಷಗಳಿವೆ. ಆದರೆ ಯಾವುದು ನಿಮ್ಮ ಚರ್ಮಕ್ಕೆ ಮತ್ತು ದೀರ್ಘಕಾಲಿಕ ಪರಿಣಾಮಕ್ಕೆ ಸೂಕ್ತ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಕೂದಲಿನ ಬೆಳವಣಿಗೆ – (Hair Growth Comparison)
ವ್ಯಾಕ್ಸಿಂಗ್: ಕೇಶಗಳನ್ನು ಬೇರು ಸಹಿತ ತೆಗೆದುಹಾಕುವುದು. ಇದರಿಂದ ಹೊಸ ಕೂದಲು ಬೆಳವಣಿಗೆ ನಿಧಾನವಾಗಿ ಆಗುತ್ತದೆ ಮತ್ತು ತೀಕ್ಷ್ಣತೆ ಕಡಿಮೆಯಾಗುತ್ತದೆ.
ಶೇವಿಂಗ್: ಕೂದಲು ಕೇವಲ ಮೇಲ್ಮೈಯಲ್ಲಿ ಕತ್ತರಿಸಲಾಗುತ್ತದೆ. ಆದ್ದರಿಂದ ಕೂದಲು ಮತ್ತೆ ಬೇಗನೆ ಬೆಳೆಯುತ್ತದೆ. ಹಾಗೂ ಮೊದಲಿಗಿಂತ ತುಂಬಾ ತೀಕ್ಷ್ಣವಾಗಿ ಇರುತ್ತದೆ.
ಚರ್ಮದ ಮೇಲೆ ಪರಿಣಾಮ (Skin Impact)
ವ್ಯಾಕ್ಸಿಂಗ್: ಚರ್ಮವನ್ನು ಚಿಕ್ಕ ಮಟ್ಟಿಗೆ ಎಳೆಯುವುದರಿಂದ ಆದರೆ ನಿರ್ದಿಷ್ಟ ಸಮಯದ ನಂತರ ಚರ್ಮ ಮೃದುವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ರೆಡ್ ನೆಸ್ ಅಥವಾ ಅಲರ್ಜಿ ಸಂಭವಿಸಬಹುದು.
ಶೇವಿಂಗ್: ಚರ್ಮದ ಮೇಲೆ ಕಡಿಮೆ ಕಿರಿಕಿರಿ ಆಗಬಹುದು, ಆದರೆ ಕೆಲವರಿಗೆ ingrown hair, ಕಟ್ಸ್ ಅಥವಾ ರಾಶ್‌ಗಳು ಆಗಬಹುದು.
ದೀರ್ಘಕಾಲೀನ ಪರಿಣಾಮ ಮತ್ತು ವೆಚ್ಚ
ವ್ಯಾಕ್ಸಿಂಗ್: ಬಹುಪಾಲು ಕೂದಲುಗಳು ನಿಧಾನವಾಗಿ ಬೆಳೆಯುತ್ತವೆ. ಆದರೆ ವ್ಯಾಕ್ಸಿಂಗ್ ಸೆಷನ್‌ಗಳಿಗೆ ಹೆಚ್ಚು ಹಣ ಬೇಕಾಗಬಹುದು.
ಶೇವಿಂಗ್: ಕಡಿಮೆ ವೆಚ್ಚ, ಆದರೆ ಮತ್ತೆ ಮತ್ತೆ ಶೇವ್ ಮಾಡಬೇಕಾಗುತ್ತದೆ.
ನಿಮ್ಮ ಚರ್ಮದ ಸ್ವಭಾವ, ಸಮಯ ಲಭ್ಯತೆ ಮತ್ತು ಬಜೆಟ್ ಅವಲಂಬನೆಯ ಮೇಲೆ ಈ ಎರಡು ವಿಧಾನಗಳ ಪೈಕಿ ಆಯ್ಕೆ ಮಾಡಬಹುದು.