ಎಲ್ಲರಿಗೂ ನನ್ನ ಮುಖ ಗ್ಲೋ ಆಗಬೇಕು, ಕ್ಲಿಯರ್ ಆಗಿರಬೇಕು ಅನ್ನೋ ಆಸೆ ಇರುತ್ತದೆ. ಸರಿಯಾದ ಮತ್ತು ನಿಯಮಿತ ತ್ವಚಾ ಆರೈಕೆ ಕ್ರಮದಿಂದ ಇದು ಸಾಧ್ಯ. ಬೆಳಿಗ್ಗೆ ಮತ್ತು ರಾತ್ರಿ ತ್ವಚೆಗೆ ಸರಳವಾದ ಆರೈಕೆ ನೀಡುವುದು ನಿಮ್ಮ ತ್ವಚೆ ಗ್ಲೋ ಸಹಾಯ ಮಾಡುತ್ತದೆ.
ಬೆಳಗಿನ ತ್ವಚೆ ಆರೈಕೆ ಕ್ರಮ:
ಮುಖ ಕ್ಲೆನ್ಸರ್ (Face Cleanser): ನಿದ್ರೆಯ ಸಮಯದಲ್ಲಿ ಉಂಟಾದ ಬೆವರು, ಎಣ್ಣೆ ಮತ್ತು ಅಶುದ್ಧಿಗಳನ್ನು ತೆಗೆದುಹಾಕುತ್ತದೆ. ನಿಮ್ಮ ತ್ವಚೆ ಪ್ರಕಾರ ನಾಜೂಕಾದ ಕ್ಲೆನ್ಸರ್ ಬಳಸಿ.
ಟೋನರ್ (Toner): ತ್ವಚೆಯ ಪಿ.ಹೆಚ್. ಮಟ್ಟವನ್ನು ಸಮತೋಲನಗೊಳಿಸಿ, ಮುಂದಿನ ಉತ್ಪನ್ನಗಳು ಮುಖದ ತ್ವಚೆ ಸರಿಯಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಆಲ್ಕೋಹಾಲ್ ರಹಿತ, ತ್ವಚೆಗೆ ಸೂಕ್ತವಾದ ಟೋನರ್ ಆಯ್ಕೆಮಾಡಿ.
ಸೀರಮ್ (Serum): ವಿಟಮಿನ್ ಸಿ ಅಥವಾ ಹೈಡ್ರೇಟಿಂಗ್ ಸೀರಮ್ ತ್ವಚೆಯ ಮೃದುತ್ವ ಮತ್ತು ಹೊಳೆಯುವಿಕೆಗೆ ಸಹಾಯ ಮಾಡುತ್ತದೆ. ಬೆಳಗಿನ ಜಾವ ವಿಟಮಿನ್ ಸಿ ಸೀರಮ್ ಉತ್ತಮ ಆಯ್ಕೆ.
ಮಾಯಿಸ್ಚರೈಸರ್ (Moisturizer): ತ್ವಚೆಗೆ ತೇವಾಂಶವನ್ನು ಒದಗಿಸಿ, ಒಣತನವನ್ನು ತಡೆಗಟ್ಟುತ್ತದೆ. ಲೈಟ್ ವೇಟ್ ಮಾಯಿಸ್ಚರೈಸರ್ ಬಳಸುವುದು ಸೂಕ್ತ.
ಸನ್‌ಸ್ಕ್ರೀನ್ (Sunscreen): ಹಾನಿಕರ ಯು.ವಿ. ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ. ಕನಿಷ್ಠ SPF 30 ಹೊಂದಿರುವ ಸನ್‌ಸ್ಕ್ರೀನ್ ಅನ್ನು ಪ್ರತಿ ದಿನ ಬಳಸಿ.
ರಾತ್ರಿ ತ್ವಚೆ ಆರೈಕೆ ಕ್ರಮ:
ಮೇಕಪ್ ರಿಮೂವರ್ ಅಥವಾ ಕ್ಲೆನ್ಸರ್: ದಿನದ ಕೊನೆಯಲ್ಲಿ ತ್ವಚೆಯ ಮೇಲೆ ಉಳಿದ ಧೂಳು, ಮೇಕಪ್ ಮತ್ತು ಎಣ್ಣೆ ಅಂಶವನ್ನು ತೆಗೆದುಹಾಕುತ್ತದೆ. ಕ್ಲೆನ್ಸಿಂಗ್ ಮಾಡಲು ಆಯಿಲ್ ಕ್ಲೆನ್ಸರ್ + ಫೋಮ್ ಕ್ಲೆನ್ಸರ್ ಬಳಸಬಹುದು.
ಟೋನರ್ : ತ್ವಚೆಯನ್ನು ಶಾಂತಗೊಳಿಸಿ, ಪೋಷಕಾಂಶಗಳನ್ನು ತ್ವಚೆಯಲ್ಲಿ ಹಿಡಿದಿಟ್ಟುಕೊಳ್ಳಲು ಸಹಾಯಕವಾಗಿದೆ.
ರಾತ್ರಿ ಸೀರಮ್: ರಾತ್ರಿಯ ಸಮಯದಲ್ಲಿಸೀರಮ್ ಬಳಸುವುದು ತ್ವಚೆಯನ್ನು ಒಣಗದಂತೆ ತಡೆಗಟ್ಟುತ್ತದೆ, ಹೈಡ್ರೇಷನ್ ಅಥವಾ ಆಂಟಿ-ಏಜಿಂಗ್ ಸೀರಮ್ ಬಳಸಿ.
ಐ ಕ್ರೀಮ್ : ಕಣ್ಣಿನ ಸುತ್ತಲಿನ ಭಾಗದಲ್ಲಿ ಕಪ್ಪು ವಲಯ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಮಾಯಿಸ್ಚರೈಸರ್/ನೈಟ್ ಕ್ರೀಮ್: ರಾತ್ರಿಯ ಹೊತ್ತಿಗೆ ತ್ವಚೆಯ ಪುನಶ್ಚೇತನಕ್ಕೆ ತೇವಾಂಶ ಒದಗಿಸುತ್ತದೆ. ತ್ವಚೆಗೆ ಸುಲಭವಾಗಿ ಹೀರುವ ಮಾಯಿಸ್ಚರೈಸರ್ ಬಳಸಿ.