ದೇಶದ ಪ್ರಧಾನಿಯಾದರು, ಮಗುವಿನಂಥ ಮನಸ್ಸು ಇನ್ನೂ ಜೀವಂತವಾಗಿದೆ! ನೀವೇ ಒಮ್ಮೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಖ್ಯಾತ ಗೇಮರ್ ಗಳ ಜೊತೆ ಈ-ಸ್ಪೋರ್ಟ್ಸ್ ಬಗ್ಗೆ ದೀರ್ಘಕಾಲ ಚರ್ಚೆ ನಡೆಸಿದ ಬಳಿಕ ಅವರೊಂದಿಗೆ ಗೇಮ್ ಗಳನ್ನೂ ಆಡಿದ್ದಾರೆ.

ವಿಡೀಯೋದಲ್ಲಿ ಅವರು ಕಣ್ಣಿಗೆ ಹೊಲೊಡೆಕ್ ಧರಿಸಿ ಸ್ಕ್ರೀನ್ ಮುಂದೆ ಜಾಯ್ ಸ್ಟಿಕ್ ಹಿಡಿದು ನಿಲ್ಲುವುದನ್ನು ವಿಡಿಯೋದಲ್ಲಿ ನೋಡಬಹುದು. ಗೇಮರ್ ಗಳು ಪ್ರಧಾನಿಯವರ ಕ್ಯಾರೆಕ್ಟರ್ ಗೆ ‘ನಮೋ’ ಅಂತಲೇ ಹೆಸರು ಕೂಡ ನೀಡಿದ್ದಾರೆ.

ಅವರು ಆಡುವಾಗ ಎಷ್ಟು ವಿಶಿಷ್ಟವಾಗಿ ಮೂಡಿ ಬರುತ್ತಾರೆ ಎಂಬುದನ್ನು ಗಮನಿಸಿ. ಅವರ ಮುಖದಲ್ಲಿ ಮಕ್ಕಳ ಉತ್ಸಾಹವನ್ನು ನೀವು ಕಾಣಬಹುದು. ಆಟವಾಡಿದ ಬಳಿಕ ಮಾತನಾಡಿದ ಮೋದಿ ಅವರು, “ನಾನು ನಿಮ್ಮ ಜಗತ್ತಿಗೆ ಹೊಸಬ.” ಎಂದು ಹೇಳುತ್ತಾ ಅವರು ಕೂಡ ಆಟವಾಡಲು ಆರಂಭಿಸುತ್ತಾರೆ, ಆಟದ ವಿಧಾನಗಳು, ಆಯಾಮಗಳು, ಚಲನೆಗಳು ಇತ್ಯಾದಿಗಳನ್ನು ಯುವಕರ ವಿವರಿಸುತ್ತಾರೆ.

ನೀವೆಲ್ಲರೂ ಈ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿ, ಪ್ರಪಂಚದಾದ್ಯಂತ ಪ್ರಸಿದ್ಧರಾಗಲಿ ಮತ್ತು ದೇಶದ ಹೆಸರನ್ನು ಉಜ್ವಲಗೊಳಿಸಬೇಕೆನ್ನುವುದು ನನ್ನ ದೊಡ್ಡ ಹಾರೈಕೆ ಎಂದು ಪ್ರಧಾನಿ ಮೋದಿ ಆಟಗಾರರಿಗೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!